Editing
ಕೊಡಗಿನ ಹುತ್ತರಿ ಸುಗ್ಗಿ
(section)
Jump to navigation
Jump to search
Warning:
You are not logged in. Your IP address will be publicly visible if you make any edits. If you
log in
or
create an account
, your edits will be attributed to your username, along with other benefits.
Anti-spam check. Do
not
fill this in!
== ಹುತ್ತರಿ ಕುಣಿತ ಮತ್ತು ಕಲೆ == ಕದಿರು ತೆಗೆಯುವ ದಿನಕ್ಕೆ ಒಂದು ವಾರದ ಮೊದಲಿಗೇ ಈ ಹಾಡು-ಕುಣಿತಗಳ ಸಿದ್ಧತೆ- ‘ಈಡು ತೆಗೆಯುವದು’ ಶುರುವಿಟ್ಟುಕೊಳ್ಳುತ್ತದೆ. ರಾತ್ರಿ ಏಳು-ಏಳೂವರೆಗೆ ಪ್ರತೀ ಕುಟುಂಬದಿಂದ ಒಬ್ಬನಂತೆ ಭಾಗವಹಿಸಿ ಊರ ‘ತಕ್ಕ’(ಮುಖ್ಯಸ್ಥ)ನ ನೇತೃತ್ವದಲ್ಲಿ ಊರ ‘ಮಂದ್’ನಲ್ಲಿ ವಿವಿಧ ಆಟ, ಹಾಡು, ಕುಣಿತಗಳ ತರಬೇತಿ ಪಡೆಯುವುದು ಇದರ ವಿಶೇಷ. ಇದೊಂದು ರೀತಿಯಲ್ಲಿ ಜಾನಪದರ ಪಾಠಶಾಲೆ. ಈ ಮಂದ್ (ಮೈದಾನ)ಗಳಲ್ಲಿ ಸಾಮ್ಯವಾಗಿ ನಾಲ್ಕರು ಊರುಗಳ ಜನ ಭಾಗವಹಿಸುತ್ತಾರೆ. ಊರ ಜನರು ಸೇರಿದರೆ ’ಊರ ಮಂದ್’, ನಾಲ್ಕಾರು ಗ್ರಾಮಗಳ ಜನರು ಸೇರಿದರೆ ’ನಾಡ ಮಂದ್’. ಹಲವು ಪ್ರದೇಶಗಳಲ್ಲಿರುವ ಕೊಡವರು ಸೊಂದೆಡೆ ಸೇರಿದರೆ ’ ದೇಶಮಂದ್’. ಇವುಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಗ್ರಾಮ/ಊರಿನ ಯುವಕರು ಪಾಲ್ಗೊಂಡು ನಾಡಿಗೆ ಕೀರ್ತಿ ತರಬೇಕೆಂಬುದು ಈ ಆಚರಣೆಯ ಆಶಯ. ಸುಮಾರು ನೂರು ವರ್ಷಗಳಿಗೆ ಮುಂಚೆ ಎಲ್ಲರೂ ನಾಲ್ಕು ಜನರು ದುಡಿಗಳನ್ನು ಬಾರಿಸುತ್ತಾ ಕೊಡವ ಜಾನಪದ ಹಾಡುಗಳನ್ನು ಹಾಡುತ್ತಾ ಅವರ ಮುಂದೆ ಊರಿನ ಮೇದರು ಅಥವಾ ಹರಿಜನರು ಡೊಳ್ಳು, ವಾಲಗಗಳನ್ನು ಬಾರಿಸುತ್ತಾ ನಡೆಯುತ್ತಾ ಮಂದ್ ತಲುಪುವುದು ವಾಡಿಕೆಯಾಗಿತ್ತಂತೆ. ಹೀಗೆ ಮಂದ್ ತಲುಪಿದ ನಂತರ ‘ಅರಪುವತರ’ ಹಾಕಿ ‘ನಾಡೆ’ ಕರೆಯುವುದು ಕ್ರಮ. ನಾಡೆ ಹಾಸ್ಯಮಯವಾದ ಒಂದು ಸಣ್ಣ ಪ್ರಹಸನದ ಪ್ರದರ್ಶನ. ನಗು ಹಸನಾಗಿ ಹಬ್ಬಬೇಕು ಎಂಬ ನಿಲುವಿನ ಆಚರಣೆಯದು. ಹುತ್ತರಿಯ ದಿನ ಆವರಣದ ರಂಗದ ಮಧ್ಯದಲ್ಲಿ ದೀಪಸ್ತಂಭ. ಅದರ ಸುತ್ತಲೂ ಸಾಂಪ್ರದಾಯಕ ಉಡುಗೆ-ತೊಡುಗೆಗಳನ್ನು ಧರಿಸಿ ನೆರೆತ ಹೆಂಗಳೆಯರು ಹುತ್ತರಿ ಹಾಡು, ಪಾಡ್ದನಗೀತೆಗಳನ್ನು ಹಾಡಿದರೆ, ಪುರುಷರು ‘ಪೊಯಿಲೇ’ ಎಂದು ಹಾಡುತ್ತಾ ಶೌರ್ಯ, ಪರಾಕ್ರಮಗಳ ಪ್ರತೀಕವಾದ ನರ್ತನವಾಡುತ್ತಾರೆ. ಮಂದ್ನ ಅರಳೀಮರದ ಸುತ್ತಲೂ ದೊಡ್ಡ ವೃತ್ತಾಕಾರದಲ್ಲಿ ಕೊಡವ ಪುರುಷರೆಲ್ಲಾ ನಿಂತು ಡೊಳ್ಳಿನ ನುಡಿತಕ್ಕೆ ಸರಿಯಾಗಿ ಹಿಡಿಕೆ ಇದ್ದು ಕಿರುಗೆಜ್ಜೆಗಳನ್ನು ಕಟ್ಟಿದ ಆಳುದ್ದನೆಯ ಬೆತ್ತದ ಕೋಲುಗಳನ್ನು ಹಿಡಿದು ಕೋಲಾಟವಾಡುತ್ತಾರೆ. ಇಬ್ಬರು ಗಂಡಸರು ಬೆತ್ತದ ಗುರಾಣಿ ಹಾಗೂ ಅರೆಯಾಳುದ್ದದ ಕೋಲನ್ನೂ ಹಿಡಿದು ಪರೆಯಕಳಿಯನ್ನಾಡುತ್ತಾರೆ. ಇದೊಂದು ಬಗೆಯ ಯುದ್ಧ ಕುಣಿತ. ಮೇದರ ”ಪರೆ’ಗೆ ಇಬ್ಬರು ಸ್ಪರ್ಧಿಗಳಂತೆ ಮೂರು ಸುತ್ತು ಹೊಡೆಯುವಂತೆ ತೋರುವ ಆಟವನ್ನು ಆಡುವರು. ಕುಳಿತು ನಿಂತು ಎದುರುಬದುರಾಗಿ ಕೋಲಿನಿಂದ ಮತ್ತೋರ್ವನ ಮೊಣಕಾಲಿಗೆ ಹೊಡೆಯುತ್ತಾ, ಮತ್ತೋರ್ವ ಗುರಾಣಿಯಿಂದ ತಡೆಯುತ್ತಾ ಆಡುತ್ತಾರೆ. ಹೊಡೆದಾಟದಲ್ಲಿ ಒಬ್ಬನಿಗಿಂತ ಮತ್ತೊಬ್ಬನ ಕೈ ಮೇಲಾದರೆ ಅದಕ್ಕೆಂದೇ ನೇಮಿಸಲ್ಪಟ್ಟ ಮೇಲ್ವಿಚಾರಕನು ಬಂದು ತಡೆ ಮಾಡುತ್ತಾನೆ. ಸಾಂಕೇತಿಕವಾದ ಬಡಿದಾಟದ ಆಚರಣೆಯಿದು. ಹೀಗೆ ಬೊಳಕಾಟ್, ಪರಿಯಕಳಿ, ಹುತ್ತರಿ ಕೋಲಾಟದಲ್ಲಿ ಪಾಲ್ಗೊಳ್ಳುವುದನ್ನು ಕಣ್ತುಂಬಿಕೊಳ್ಳುವುದೇ ಒಂದು ಸೊಗಸು. ಈ ಎಲ್ಲಾ ನೃತ್ತಸಂಭ್ರಮದ ಅಂತಿಮಘಟ್ಟ ಸಾಮೂಹಿಕ ಕುಣಿತ. ಹೀಗೆ ಊರ ಕೋಲು ಆದ ಬಳಿಕ ಗಂಡಸರು ’ತಕ್ಕ’ನ ಮನೆಗೆ ಹೋಗುವರು. ಅಲ್ಲಿ ತಾಳ, ದುಡಿಗಳನ್ನೆತ್ತಿಕೊಂಡು ಪೂರ್ವಜರ ನೆನಪನ್ನು ಕೊಡುವ, ಸಂಭ್ರಮದ ಇಂದಿನ ದಿನಗಳನ್ನು ನೆನಪಿಸುವಂತೆ ಜಾನಪದ ಮಟ್ಟಿನ ಹಾಡುಗಳನ್ನು ದುಡಿ ನುಡಿಸುತ್ತಾ ’ಬಾಳೊಪಾಟ್’ ಹಾಡುವರು. ನೆಲದ- ಕುಲದ ಹಿರಿಮೆಯಷ್ಟೇ ಅಲ್ಲದೆ, ಖ್ಯಾತನಾಮರ ಬಗೆಗೆ,ಆ ಮನೆಯಲ್ಲಿ ಹೊಸತಾಗಿ ಮದುವೆಯಾದವರು, ಮಕ್ಕಳು ಹುಟ್ಟಿದ್ದು ಅಥವಾ ಬಂಧುಬಾಂಧವರು ಜೊತೆ ಸೇರಿದ್ದರೆ ಅವನ್ನೂ ಗುರುತಿಸಿ ಜಾಣ್ಮೆಯಿಂದ ಸೇರಿಸಿಕೊಂಡು ಹಾಡುತ್ತಾರೆ. ಆ ಬಳಿಕ ಊರಿನ ಆಯಾ ಐನ್ ಮನೆಯ ಎದುರಿಗೆ ನಿಂತು ಸ್ತುತಿರೂಪದಲ್ಲಿ ಇದೇ ರೀತಿ ಬೆಳಗಾಗುವವರೆಗೆ ಹಾಡುತ್ತಾರೆ. ಆ ರಾತ್ರಿ ಎಲ್ಲರ ಮನೆಗೂ ಹೋಗಲಾಗದೇ ಇದ್ದರೆ ಮಾರನೇ ದಿನ ಹೋಗಿ ಹಾಡಿ ಮುಗಿಸುತ್ತಾರೆ. ಇದನ್ನು” ಮನೆ ಪಾಟ್’ ಅಂದರೆ ’ಮನೆ ಹಾಡುವುದು’ ಎನ್ನುತ್ತಾರೆ. ಅದು ಮುಗಿದು ತಕ್ಕ ಮುಖ್ಯಸ್ಥನ ಮನೆಗೆ ಹೋಗಿ ದುಡಿ ತಾಳಗಳನ್ನು ಹಿಂತಿರುಗಿಸಿ ತಮ್ಮ ಮನೆಗಳಿಗೆ ಹೋಗುತ್ತಾರೆ. ಪಾಡ್ದನಗಳನ್ನು ಹೋಲುವ ಈ ಹಾಡಿಗೆ ಒಂದು ರೀತಿಯ ವಿಶೇಷ ರಾಗ, ತಾಳಗಳ ಜೊತೆಗೆ ಅಲ್ಲಲ್ಲೇ ಕವಿತ್ವವನ್ನು ಕಟ್ಟುವ ಪ್ರತಿಭೆಯೂ ಬೇಕಾಗುತ್ತದೆ. ಹೀಗೆ ಹಾಡಿ ಗಳಿಸಿದ ಹಣದಲ್ಲಿ ಮಾಡಿ ಹಬ್ಬವನ್ನು ಸಮಾಪ್ತಿ ಮಾಡುವ ರೀತಿಯೇ ‘ಊರೊರ್ಮೆ’. ಹುತ್ತರಿ ಮುಗಿದ ಒಂದು ಸಂಜೆ ಊರಿನ ಮನೆಯಿಂದ ಒಬ್ಬನಂತೆ ಪಾಲ್ಗೊಂಡು ಕಾಡುಮರಗಳ ನಡುವಿನ ತೋಪಿನಲ್ಲಿ ಕುಳೀತು ಸಾಮೂಹಿಕ ಭೋಜನ ಮಾಡುವ ಕ್ರಮವಿದು. ಮೊದಲು ಬೇಟೆಯನ್ನೂ ಆಡಿಔತಣ ಮಾಡಿಸುತ್ತಿದ್ದರಂತೆ. ಈಗ ಆ ಕ್ರಮವಿಲ್ಲ. ಊರಿನ ಜನರಲ್ಲಿ ಏನಾದರೂ ವೈಮನಸ್ಯವಿದ್ದರೆ ಹಿರಿಯರು ರಾಜಿ ಮಾಡಿಸಲಿಕ್ಕೂ ಈ ವಿಧಿ ಬಳಕೆಯಾಗುತ್ತಿದ್ದದ್ದಿದೆ. ಒಟ್ಟಿನಲ್ಲಿ ಒಂದು ಸುಗ್ಗಿಯ ಹಬ್ಬಕ್ಕೆ ಊರಿನವರೆಲ್ಲಾ ಕೂಡಿ ಒಂದಾಗಿ ಬಾಳಬೇಕೆಂಬ ಸಮಷ್ಟಿಪ್ರಜ್ಞೆ ಔತಣದ ಉದ್ದೇಶ.
Summary:
Please note that all contributions to enIKSwiki are considered to be released under the Creative Commons Attribution-ShareAlike (see
Enwiki:Copyrights
for details). If you do not want your writing to be edited mercilessly and redistributed at will, then do not submit it here.
You are also promising us that you wrote this yourself, or copied it from a public domain or similar free resource.
Do not submit copyrighted work without permission!
Cancel
Editing help
(opens in new window)
Navigation menu
Personal tools
Not logged in
Talk
Contributions
Log in
Namespaces
Page
Discussion
English
Views
Read
View history
More
Navigation
Main page
Help about MediaWiki
Tools
What links here
Related changes
Special pages
Page information