Editing
ನಿಃಶಂಕ ಶಾರ್ಙ್ಗದೇವನ ಸಂಗೀತರತ್ನಾಕರ
(section)
Jump to navigation
Jump to search
Warning:
You are not logged in. Your IP address will be publicly visible if you make any edits. If you
log in
or
create an account
, your edits will be attributed to your username, along with other benefits.
Anti-spam check. Do
not
fill this in!
== ಗ್ರಂಥದ ಪೂರ್ವಸೂರಿಗಳು ಮತ್ತು ಪ್ರೇರಣೆಗಳು == ಶಾರ್ಙ್ಗದೇವನು ತನ್ನ ಗ್ರಂಥ ಸಂಗೀತ ರತ್ನಾಕರದಲ್ಲಿ ಸದಾಶಿವ, ಪಾರ್ವತಿ, ಬ್ರಹ್ಮ, ಭರತ, ಕಾಶ್ಯಪ, ಮತಂಗ, ಯಷ್ಟಿಕ, ದುರ್ಗಾಶಕ್ತಿ, ಶಾರ್ದೂಲ, ಕೋಹಲ, ವಿಶಾಖಿಲ, ದತ್ತಿಲ, ಕಂಬಲ, ಅಶ್ವತರ, ವಾಯು, ವಿಶ್ವಾವಸು, ರಂಭಾ, ಅರ್ಜುನ, ನಾರದ, ತುಂಬುರು, ಆಂಜನೇಯ, ಮಾತೃಗುಪ್ತ, ರಾವಣ, ನಂದಿಕೇಶ್ವರ, ಸ್ವಾತಿರಂಗ, ಬಿಂದುರಾಜ, ಕ್ಷೇತ್ರರಾಜ, ರಾಹುಲ, ರುದ್ರಟ, ನಾನ್ಯದೇವ, ಭೋಜರಾಜ, ಸೋಮೇಶ್ವರ, ಜಗದೇಕಮಲ್ಲ, ಲೋಲ್ಲಟ, ಉದ್ಭಟ, ಶಂಕುಕ, ಅಭಿನವಗುಪ್ತ, ಕೀರ್ತಿಧರರ ಗ್ರಂಥ ಮತ್ತು ವ್ಯಾಖ್ಯಾನಗಳನ್ನು ಪರಿಶೀಲಿಸಿ ರಚಿಸಿದೆ ಎನ್ನುತ್ತಾನೆ. ಇದರಿಂದ ಆತನ ಓದಿನ ವ್ಯಾಪ್ತಿ ಮತ್ತು ಪೂರ್ವಸೂರಿಗಳ ಗ್ರಂಥ ಪರಂಪರೆಯ ರಾಶಿ ಹೇಗಿತ್ತು ಎನ್ನುವ ಎರಡೂ ವಿಚಾರಗಳನ್ನೂ ಅರ್ಥ ಮಾಡಿಕೊಳ್ಳಬಹುದು. ಹಾಗೆಂದೇ ಈತನನ್ನು ಓದದೇ ಅನಂತರದ ಗ್ರಂಥಗಳು ಮುನ್ನಡೆದದ್ದೇ ಇಲ್ಲವೆಂಬಷ್ಟು ಈತ ಪ್ರತಿಭಾಸಂಪತ್ತಿಯುಳ್ಳ ಪ್ರಖ್ಯಾತನಾದ ಲಾಕ್ಷಣಿಕ. ಸಂಗೀತರತ್ನಾಕರದ ಅಧ್ಯಾಯ ಪದ್ಧತಿ ಸ್ವರ, ರಾಗ, ಪ್ರಬಂಧ, ತಾಳ, ವಾದ್ಯ, ನರ್ತನ ಎಂಬುದಾಗಿ ಇದ್ದು; ಬಹಳ ಮಂದಿ ಲಾಕ್ಷಣಿಕರು ಇದನ್ನು ಪಾಲಿಸಿದ್ದಾರೆ. ಸಂಗೀತರಾಜ, ನರ್ತನನಿರ್ಣಯ, ಅಭಿನವಭರತಸಾರಸಂಗ್ರಹ, ಭರತಸೇನಾಪತಿ, ಸಂಗೀತಮುಕ್ತಾವಳಿ, ಸಂಗೀತಮಕರಂದ, ಮಹಾಭರತ ಚೂಡಾಮಣಿ ಮೊದಲಾಗಿ ಇನ್ನೂ ಅನೇಕ ಗ್ರಂಥಗಳೂ ಶಾರ್ಙ್ಗದೇವನನ್ನು ಅನುಸರಿಸಿಯೇ ಲಕ್ಷಣಗಳನ್ನು ದಾಖಲಿಸುತ್ತವೆ. ಎಷ್ಟರಮಟ್ಟಿಗೆಂದರೆ ತುಳಜ ಎಂಬ ರಾಜನು ೧೮ನೇ ಶತಮಾನದಲ್ಲಿ ಬರೆದ ಭರತನಾಟ್ಯದ ಅಡವುಗಳ ಉಲ್ಲೇಖ ಕೊಡುವ ಸಂಗೀತ ಸಾರಾಮೃತ ಎಂಬ ಗ್ರಂಥವು ಸಂಗೀತರತ್ನಾಕರದಿಂದ ಮೊದಲ್ಗೊಂಡು ನೃತ್ತರತ್ನಾವಳಿ, ಸಂಗೀತಮುಕ್ತಾವಲಿ, ಅಭಿನಯದರ್ಪಣ, ನಾಟ್ಯಚೂಡಾಮಣಿ, ನರ್ತನನಿರ್ಣಯ, ಸಂಗೀತದರ್ಪಣ, ಸಂಗೀತಮಕರಂದಗಳನ್ನು ಪರಿಶೀಲಿಸಿ ಉಲ್ಲೇಖಿಸಿದೆ. ನರ್ತನದ ವಿಚಾರಕ್ಕೆ ಬಂದರೆ ಸಂಗೀತರತ್ನಾಕರದ ಕೊನೆಯದಾದ ಏಳನೇ ಅಧ್ಯಾಯವೊಂದೇ ಸುಮಾರು ೧೬೭೮ ಶ್ಲೋಕಗಳಷ್ಟು ಇದೆ. ನರ್ತನಾಧ್ಯಾಯ ಆರಂಭಗೊಳ್ಳುವುದು ‘ಆಂಗಿಕಂ ಭುವನಂ ಯತ್ರ ವಾಚಿಕಂ ಸರ್ವ ವಾಙ್ಮಯಂ | ಆಹಾರ್ಯಂ ಚಂದ್ರ ತಾರಾದಿ ತಂ ನುಮಃ ಸಾತ್ತ್ವಿಕಂ’ ಎಂಬ ಶ್ಲೋಕದಿಂದ. ಅರರೆ. ಇದು ನಂದಿಕೇಶ್ವರನ ಅಭಿನಯದರ್ಪಣದ ನಾಂದೀಶ್ಲೋಕವಲ್ಲವೇ ಅಂದರೆ .. ಹೌದು. ಸಂಗೀತರತ್ನಾಕರದಲ್ಲಿ ನಂದಿಕೇಶ್ವರಕೃತ ಗ್ರಂಥಗಳಲ್ಲಿರುವ ಎಷ್ಟೋ ಲಕ್ಷಣಶ್ಲೋಕಗಳೂ ದೊರೆಯುತ್ತವೆ. ಒಂದೋ ಅಭಿನಯದರ್ಪಣ-ಭರತಾರ್ಣವಗಳು ಸಂಗೀತರತ್ನಾಕರವನ್ನು ಪರಿಶೀಲಿಸಿರಬೇಕು ಇಲ್ಲವೇ ಸಂಗೀತರತ್ನಾಕರವು ನಂದಿಕೇಶ್ವರನ ಗ್ರಂಥಗಳನ್ನು ಗಮನಿಸಿದ್ದಿರಬೇಕು. ಆದರೆ ಸಂಗೀತರತ್ನಾಕರ ಗ್ರಂಥಕ್ಕೆ ಇರುವ ವ್ಯಾಖ್ಯಾನಗಳಿಂದಾಗಿ ಈ ಶ್ಲೋಕ ಸಂಗೀತರತ್ನಾಕರದ್ದೇ ಮೂಲ ಶ್ಲೋಕವೆನ್ನುವುದು ತಿಳಿದುಬರುತ್ತದೆ.<ref>ಓದಿ ಇದೇ ಲೇಖಕರ ಕೃತಿ- ನಂದಿಕೇಶ್ವರ. https://www.noopurabhramari.com/want-to-subscribe-noopura-bhramari-and-purchase-the-dance-books/</ref> ನರ್ತನಾಧ್ಯಾಯದಲ್ಲಿ ಅಂಗೋಪಾಂಗಭೇದಗಳು, ನಾಟ್ಯಶಾಸ್ತ್ರದ ಮಾರ್ಗನೃತ್ತಕರಣಗಳೆಂಬ ಚಲನೆಗಳು, ಮಾರ್ಗೋತ್ತರ ಕಾಲ ಅಂದರೆ ನಾಟ್ಯಶಾಸ್ತ್ರದ ನಂತರಕ್ಕೆ ಚಾಲ್ತಿಗೆ ಬಂದ ಉತ್ಪ್ಲುತಿ ಕರಣಗಳು, ಸ್ಥಾನಕಗಳು, ಚಾರಿಗಳು, ಅಂಗಹಾರಗಳು, ಲಾಸ್ಯಾಂಗ ಎಂಬ ಸುಕುಮಾರವಾದ ನರ್ತನ ಕ್ರಮ, ನವರಸ ಲಕ್ಷಣ, ವಿವಿಧ ಬಗೆಯ ನೃತ್ತಗಳು ಮತ್ತು ನರ್ತಕರು, ನರ್ತಕಲಕ್ಷಣಗಳು ಮೊದಲಾದವನ್ನು ವಿವರವಾಗಿ ಕಾಣಬಹುದು. ಇವೆಲ್ಲದಕ್ಕೂ ಶಾರ್ಙ್ಗದೇವನು ತನ್ನ ಪೂರ್ವಸೂರಿಗಳಾದ ಅಭಿನವಗುಪ್ತ, ಲೋಲ್ಲಟ, ಸೋಮೇಶ್ವರ, ಮತಂಗ, ಕೋಹಲ ಮೊದಲಾದ ಹಲವು ಲಾಕ್ಷಣಿಕರನ್ನು ಆಶ್ರಯಿಸಿದ್ದಾನೆ. ಅದರಲ್ಲೂ ಚಾಲುಕ್ಯ ಚಕ್ರವರ್ತಿ ಮೂರನೇ ಸೋಮೇಶ್ವರನ ಮಾನಸೋಲ್ಲಾಸ ಗ್ರಂಥವು ಸೂಚಿಸುವ ವಿವಿಧ ನೃತ್ತಗಳು, ಉತ್ಪ್ಲುತಿಕರಣಗಳಿಗೆ ಸಂಗೀತ ರತ್ನಾಕರವು ಆದ್ಯತೆ ಇತ್ತಿದೆಯೆನ್ನುವುದು ಅಧ್ಯಯನದಿಂದ ತಿಳಿಯುತ್ತದೆ. ಆದರೆ ಮಾನಸೋಲ್ಲಾಸಕ್ಕಿಂತ ಆರು ಉತ್ಪ್ಲುತಿಕರಣಗಳು ಸಂಗೀತರತ್ನಾಕರದಲ್ಲಿ ಹೆಚ್ಚಿವೆ. ಅದಾದ ಬಳಿಕ ಸಪ್ತವಿಧ ಪಾದಭ್ರಮರಿ ಮತ್ತು ತಲೆಯನ್ನು ಕೆಳಗಿಟ್ಟು ತಿರುಗುವ ಐದು ಬಗೆಯ ಶಿರೋಭ್ರಮರಿಗಳನ್ನೂ ಒಟ್ಟಾಗಿಸಿ ೩೬ ಉತ್ಪ್ಲುತಿಕರಣಗಳಾಗಿ ಸಂಗೀತರತ್ನಾಕರ ಲಕ್ಷಣ ಬರೆದಿದೆ. ಅಂದರೆ ಮಾನಸೋಲ್ಲಾಸದ ಹದಿನೆಂಟು ಉತ್ಪ್ಲುತಿ ಕರಣಗಳೇ ಸಂಗೀತರತ್ನಾಕರದ ಹೊತ್ತಿಗೆ ೩೬ ಎಂದು ವರ್ಗೀಕರಣವಾಗುತ್ತವೆ. ಹೀಗೆ ಮಾನಸೋಲ್ಲಾಸಕ್ಕಿಂತ ಹೆಚ್ಚಾದ ಸಂಖ್ಯೆಯಲ್ಲಿ ಉತ್ಪ್ಲುತಿಕರಣಪ್ರಪಂಚವನ್ನು ಭ್ರಮರಿಗಳ ಸಹಿತ ಸಂಗೀತರತ್ನಾಕರ ಹಿಗ್ಗಿಸಿಕೊಡುತ್ತದೆ<ref>ಓದಿ. ಯಕ್ಷಮಾರ್ಗಮುಕುರ ಗ್ರಂಥ- ಡಾ.ಮನೋರಮಾ ಬಿ.ಎನ್ 2022- ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಕಟಣೆ. ವಿವರಗಳಿಗೆ https://www.noopurabhramari.com/yakshamargamukura/</ref>. ಸಂಗೀತರತ್ನಾಕರದಿಂದ ಅನಂತರದಲ್ಲಿ ಬಂದಂಥ ಬಹುತೇಕ ಗ್ರಂಥಗಳೂ ಭ್ರಮರಿಗಳನ್ನು ಉತ್ಪ್ಲುತಿಕರಣದ ಸಾಲಿನಲ್ಲೇ ವಿವರಿಸಿವೆ. ಈ ಹಿನ್ನೆಲೆಯಿಂದ ನೋಡಿದಾಗ ಆತ ತನ್ನನ್ನು ಕರಣಾಧಿಪ ಎಂದು ಕರೆದುಕೊಂಡಿದ್ದು ಕೇವಲ ಕರಣಿಕ ಉದ್ಯೋಗಕ್ಕಷ್ಟೇ ಅಲ್ಲ; ಕರಣಪ್ರಕರಣಗಳ ಲಕ್ಷಣದಲ್ಲಿ ವಿಶೇಷ ವಿಭಾಗಗಳನ್ನು ಮಾಡಿದ ಕೀರ್ತಿಯೂ ಆತನದ್ದೇ ಎಂಬ ಮಟ್ಟಿಗೆ ಆ ಕರಣಾಧಿಪ ವಿಶೇಷಣ ಅನ್ವರ್ಥನಾಮಕವಾಗಿದೆ ಎಂದುಕೊಳ್ಳಬಹುದು.
Summary:
Please note that all contributions to enIKSwiki are considered to be released under the Creative Commons Attribution-ShareAlike (see
Enwiki:Copyrights
for details). If you do not want your writing to be edited mercilessly and redistributed at will, then do not submit it here.
You are also promising us that you wrote this yourself, or copied it from a public domain or similar free resource.
Do not submit copyrighted work without permission!
Cancel
Editing help
(opens in new window)
Navigation menu
Personal tools
Not logged in
Talk
Contributions
Log in
Namespaces
Page
Discussion
English
Views
Read
View history
More
Navigation
Main page
Help about MediaWiki
Tools
What links here
Related changes
Special pages
Page information