Editing
ನಂದಿಕೇಶ್ವರನ ಭರತಾರ್ಣವ
(section)
Jump to navigation
Jump to search
Warning:
You are not logged in. Your IP address will be publicly visible if you make any edits. If you
log in
or
create an account
, your edits will be attributed to your username, along with other benefits.
Anti-spam check. Do
not
fill this in!
== ಗ್ರಂಥಕರ್ತೃ ನಂದಿಕೇಶ್ವರನು ಶಿವನ ವಾಹನನೇ? == ನಂದಿಕೇಶ್ವರನು ಶಿವನ ವಾಹನ, ಗಣಪ್ರಮುಖನೆಂದೇ ಪ್ರಸಿದ್ಧ. ಶಾಸ್ತ್ರಪ್ರಪಂಚದಲ್ಲಿಯೂ ಇದೇ ಹೆಸರಿನ ಲಾಕ್ಷಣಿಕನು ಇದ್ದಾನೆ. ಆತ ನಾಟ್ಯಶಾಸ್ತ್ರಕ್ಕೆ ೧೦ನೇ ಅತಮಾನದ ಹೊತ್ತಿಗೆ ವ್ಯಾಖ್ಯಾನ ಬರೆದ ಅಭಿನವಗುಪ್ತನ ಮೊದಲಿಗೂ ಮತ್ತು ಅನಂತರದಲ್ಲಿಯೂ ಸಿಗುತ್ತಾನೆ. ಆದರೆ ಅಭಿನವಭಾರತೀ ಉಲ್ಲೇಖಗಳಲ್ಲಿರುವ ನಂದಿಕೇಶ್ವರನು ಅಭಿನಯದರ್ಪಣ, ಭರತಾರ್ಣವಗಳ ಕರ್ತೃವಾಗಿರಲಿಕ್ಕಿಲ್ಲವೆನಿಸುತ್ತದೆ. ಹೀಗಿದ್ದೂ ಲಾಕ್ಷಣಿಕ ನಂದಿಕೇಶ್ವರನೇ ಶಿವನ ವಾಹನ ನಂದಿಯೆಂದೂ ಮತ್ತು ಆತನು ಭರತಮುನಿಗಿಂತಲೂ ಹಳಬನೆಂದೂ; ಹೇಳುವುದಿದೆ. ಆದರೆ ಪುರಾಣಪುರುಷರ ಹೆಸರುಗಳನ್ನು ಹೊತ್ತ ವ್ಯಕ್ತಿಗಳು ಸಾಮಾನ್ಯರೂ ಆಗಿರಬಹುದಲ್ಲ! ಇಲ್ಲವೇ ತಾವು ನಂಬುವ ಪರಂಪರೆಯ ಮೂಲಪುರುಷನ ಹೆಸರನ್ನೇ ಮುಂದುವರೆಸಿಕೊಂಡು ಬಂದ ಕುಲಕರ್ತವ್ಯ ಅವರ ಪಾಲಿಗಿದ್ದರಬಹುದು. ಉದಾಹರಣೆಗೆ: ಮತಂಗಭರತಮ್, ಆದಿಭರತ, ಸದಾಶಿವಭರತ, ಅರ್ಜುನಭರತ, ಮೊದಲಾದವು ಭರತ, ಮತಂಗನಾಮಕವೇ ಆದರೂ ಇವು ಅರ್ವಾಚೀನ ಅಂದರೆ ಇತ್ತೀಚೆಗಿನ ಶತಮಾನಗಳಲ್ಲಿ ಬಂದಿರುವ ಗ್ರಂಥಗಳೇ ಆಗಿವೆ. ಹೀಗೆಯೇ ಪೂರ್ವಾಚಾರ್ಯರೆನಿಸಿರುವ ಇನ್ನಿತರ ಲಾಕ್ಷಣಿಕರು ನಾರದ, ಮತಂಗ, ಆಂಜನೇಯ, ಯಾಜ್ಞವಲ್ಕ್ಯ, ಸದಾಶಿವ/ಮಹೇಶ್ವರ, ಪಾರ್ವತೀ, ಅರ್ಜುನ, ಬೃಹಸ್ಪತಿ, ಕೋಹಲರ ಹೆಸರುಗಳೂ ಕೂಡಾ. ಇವರ ಹೆಸರಿನಲ್ಲಿಯೇ ಹಲವು ಗ್ರಂಥಗಳು ಇವೆಯಾದರೂ ಅವೆಲ್ಲವೂ ಒಂದೇ ಕಾಲಘಟ್ಟಕ್ಕೆ ಸೇರಿದ ಗ್ರಂಥಗಳಲ್ಲ. ಇವರ ಹೆಸರುಗಳು ಪೌರಾಣಿಕ ವ್ಯಕ್ತಿಗಳದ್ದೇ ಆದರೂ ಅವರ ವ್ಯಕ್ತಿತ್ವ ಅಲೌಕಿಕದ್ದಲ್ಲ. ಹಾಗೆಂದೇ ಪೂರ್ವಸೂರಿಗಳಾದ ಗ್ರಂಥಕಾರರೆಲ್ಲರೂ ಪುರಾಣಪುರುಷರಲ್ಲ; ಮತ್ತು ಅವರ ಹೆಸರಿನಲ್ಲಿರುವ ಉಲ್ಲೇಖಗಳೆಲ್ಲವೂ ಭರತನಿಗಿಂತಲೂ ಪ್ರಾಚೀನ ಎಂದೆಣಿಸಬೇಕಿಲ್ಲ. ಹೀಗೆ ಹೇಳುವಲ್ಲಿ ಆ ಗ್ರಂಥಗಳನ್ನು ಮೂಲದಲ್ಲೇ ಓದಿ ತಿಳಿದ ಅಧ್ಯಯನ ಈ ಲೇಖನದ ರಚನಾಕಾರರಿಗಿದೆ.<ref>2022. ಯಕ್ಷಮಾರ್ಗಮುಕುರ, ಡಾ.ಮನೋರಮಾ ಬಿ.ಎನ್.</ref> ಹಾಗೆಯೇ ಯಾವುದೇ ಗ್ರಂಥರಚನಕಾರನು ತನ್ನ ಹಿಂದಿನವರ ಅಂದರೆ ಪೂರ್ವಸೂರಿಗಳ ಹೆಸರನ್ನು ತನ್ನ ಗ್ರಂಥ ಲಕ್ಷಣಗಳೊಳಗೆ ಉದ್ಧರಿಸಿಕೊಳ್ಳುವುದರ ಹಿನ್ನೆಲೆಯಲ್ಲಿ ಬಹಳಷ್ಟು ಭಾವನೆಗಳಿರುತ್ತವೆ. ಅಂದರೆ ತಾವು ನಂಬಿಕೊಂಡು ಬಂದ ಪರಂಪರೆಯನ್ನು ಪಾಲಿಸುವ ಋಣ, ತಮ್ಮ ಪ್ರಾಚೀನರ ಬಗೆಗೆ ಪ್ರೀತಿ-ನಿಷ್ಠೆ ಇದ್ದಿರಬಹುದು ಅಥವಾ ಪರಂಪರೆಯಲ್ಲಿ ಕರ್ಣಾಕರ್ಣಿಯಾಗಿ ತಿಳಿದುಬಂದ ಕಥೆಗಳನ್ನು ಅಳವಡಿಸಿಕೊಂಡಿರಲೂಬಹುದು. ಇಲ್ಲವೇ ತಮ್ಮ ಲಕ್ಷಣರಚನೆಯ ಜ್ಞಾನದ ಬಗ್ಗೆ ಓದುಗರಲ್ಲಿ ‘ಇದು ಅಧಿಕೃತ’ ಎಂಬ ಅಭಿಪ್ರಾಯವನ್ನು ಸೃಷ್ಟಿಸುವುದು ಮತ್ತು ಪುರಾಣೋಕ್ತ/ಪ್ರಾಚೀನ ಉಲ್ಲೇಖಗಳನ್ನು ತಂದಷ್ಟೂ ತಾವು ತರ್ಕಾತೀತವಾಗಬಹುದು ಎಂಬ ಭಾವನೆಯೂ ಕೆಲವೊಮ್ಮೆ ಇರುತ್ತದೆ. ಅಂತೆಯೇ ಗ್ರಂಥ ಲಕ್ಷಣಗಳನ್ನು ಬರೆಯುವ ಕಾಲಕ್ಕೆ ಏರ್ಪಟ್ಟಿರಬಹುದಾದ ಚರ್ಚೆ-ಸಂವಾದ-ಗೋಷ್ಠಿಯ ಮುಖ್ಯಾಂಶಗಳನ್ನು, ತರ್ಕಗಳನ್ನು ಸಾಧ್ಯವಾದಷ್ಟೂ ಕಾಲಾತೀತವೆನಿಸಬೇಕು, ಸಾಧಾರಣೀಕರಣಗೊಳಿಸಬೇಕು ಎಂಬ ಆಶಯದಲ್ಲಿಯೂ ಪುರಾಣಪುರುಷರನ್ನು ಉಲ್ಲೇಖಿಸುವುದು ಇದ್ದಂತಿದೆ. ಒಟ್ಟಿನಲ್ಲಿ ಗ್ರಂಥಕರ್ತೃ ಮತ್ತು ಆತನ ಕಾಲವನ್ನು ಗ್ರಂಥದೊಳಗಿನ ಲಕ್ಷಣವಿಚಾರಕ್ಕೆ ಸಾಪೇಕ್ಷವಾಗಿ ಗಣಿಸಿ ಗ್ರಂಥಮೌಲ್ಯ ಮತ್ತು ಕಾಲದ ನಿರ್ಣಯ ಮಾಡಬೇಕು. ಕೇವಲ ಗ್ರಂಥರಚನಾಕಾರನ ಹೆಸರನ್ನಾಗಲೀ-ಕಾಲವನ್ನಾಗಲೀ ಅಥವಾ ಪುರಾಣಪ್ರಸಕ್ತಿಯನ್ನಷ್ಟೇ ಗಣಿಸಿ ಶ್ರೇಷ್ಠತೆಯನ್ನು ತೂಗಲಾಗದು.
Summary:
Please note that all contributions to enIKSwiki are considered to be released under the Creative Commons Attribution-ShareAlike (see
Enwiki:Copyrights
for details). If you do not want your writing to be edited mercilessly and redistributed at will, then do not submit it here.
You are also promising us that you wrote this yourself, or copied it from a public domain or similar free resource.
Do not submit copyrighted work without permission!
Cancel
Editing help
(opens in new window)
Navigation menu
Personal tools
Not logged in
Talk
Contributions
Log in
Namespaces
Page
Discussion
English
Views
Read
View history
More
Navigation
Main page
Help about MediaWiki
Tools
What links here
Related changes
Special pages
Page information