Editing
ಚಾಳುಕ್ಯ ರಾಜ ಮೂರನೇ ಸೋಮೇಶ್ವರನ ಮಾನಸೋಲ್ಲಾಸ
(section)
Jump to navigation
Jump to search
Warning:
You are not logged in. Your IP address will be publicly visible if you make any edits. If you
log in
or
create an account
, your edits will be attributed to your username, along with other benefits.
Anti-spam check. Do
not
fill this in!
== ಮಾನಸೋಲ್ಲಾಸ- ಅಧ್ಯಾಯಗಳು == === ಮೊದಲನೆಯ ವಿಶಂತಿ === ರಾಜ್ಯ ಪ್ರಕರಣ- ರಾಜ್ಯವನ್ನು ಪಡೆಯುವ ಮತ್ತು ಅದನ್ನು ಸಮರ್ಥವಾಗಿ ಆಳುವ ವಿಧಾನಗಳನ್ನು ವಿವರಿಸುತ್ತದೆ; ತನ್ನ ರಾಜ್ಯವನ್ನು ವಿಸ್ತರಿಸಲು ಬಯಸುವ ರಾಜನಿಗೆ ಅಗತ್ಯವಾದ ಅರ್ಹತೆಗಳು, ಅದನ್ನು ಪಡೆಯುವಲ್ಲಿ ಆತನ ಶ್ರಮ- ಸಾಮರ್ಥ್ಯಗಳು; ರಾಜ್ಯಭಾರದ ಸುಳುಹು-ಸೂಕ್ಷ್ಮಗಳನ್ನು ದಂಡನೀತಿ ಮತ್ತು ಕೌಟಿಲ್ಯನ ಅರ್ಥಶಾಸ್ತ್ರಕ್ಕೆ ಹೋಲಿಕೆಯೆಂಬಂತೆ ಗುರುತಿಸಬಹುದು. === ಎರಡನೆಯ ವಿಂಶತಿ === ಪ್ರಾಪ್ತ ರಾಜ್ಯ ಸ್ಥಾಯಿಕರಣವು ರಾಜನ ಸ್ಥಾನವನ್ನು ಬಲವಾಗಿ ಮತ್ತು ಸ್ಥಿರವಾಗಿ ನಿರ್ವಹಿಸುವ ವಿಧಾನಗಳನ್ನು ವಿವರಿಸುತ್ತದೆ; ಮಂತ್ರಿಗಳು- ಕೋಶಾಧಿಕಾರಿಗಳು- ಪುರೋಹಿತ- ಧರ್ಮಾಧಿಕಾರಿ- ಸಾರಥಿ-ಲೇಖಕ- ಪ್ರತೀಹಾರ, ಸಂಧಿವಿಗ್ರಹಿಕ, ಹೀಗೆ ಅನೇಕ ಅಧಿಕಾರಿಗಳಳ ಅರ್ಹತೆಗಳು, ಅವರ ಕರ್ತವ್ಯಗಳು ಮತ್ತು ನೀತಿ ಸಂಹಿತೆಗಳು, ಹೀಗೆ,. ರಾಜ್ಯಪಾಲನೆಯ ವಿಧಾನಗಳು, ಅದರ ಮೂಲಸೌಕರ್ಯ, ವಾಸ್ತುಶಿಲ್ಪ, ಸೈನ್ಯದ ನಿರ್ವಹಣೆ ಮತ್ತು ತರಬೇತಿ, ಸೇನಾಪತಿಯ ಸಾಮರ್ಥ್ಯಗಳು ಮತ್ತು ಜವಾಬ್ದಾರಿಗಳು, ಖಜಾನೆ ಮತ್ತು ತೆರಿಗೆಯ ಆಡಳಿತ, ಚತುರೋಪಾಯಗಳು, ನಿಧಿಸಂಗ್ರಹ, ವಿಜಯಯಾತ್ರೆ, ಯುದ್ಧಕಾಲದ ಕ್ರಮ, ಇದರಲ್ಲೇ ಸೈನ್ಯಕ್ಕೆ ಸೇವೆ ಸಲ್ಲಿಸುವ ಪಶುವೈದ್ಯಕೀಯ ಆರೈಕೆ, ಪೋಷಣೆ ಮತ್ತು ತರಬೇತಿಯ ಅಧ್ಯಾಯಗಳನ್ನು ಒಳಗೊಂಡಿದೆ. === ಮೂರನೆಯ ವಿಂಶತಿ === ಇಪ್ಪತ್ತು ಬಗೆಯ ಉಪಭೋಗಗಳನ್ನು ವಿವರಿಸುತ್ತದೆ. ಗೃಹ- ಸ್ನಾನ- ಪಾದುಕಾ- ತಾಂಬೂಲ-ವಿಲೇಪನ-ವಸ್ತ್ರ- ಮಾಲ್ಯ- ಭೂಷಣ- ಆಸನ- ಚಾಮರ- ಆಸ್ಥಾನ- ಪುತ್ರಭೋಗ-ಅನ್ನ-ಪಾನೀಯ-ಪಾದಾಭ್ಯಂಗ- ಯಾನ- ಛತ್ರ- ಶಯ್ಯಾ- ಧೂಪ ಮತ್ತು ಸ್ತ್ರೀ ಎಂಬ ೨೦ ಉಪಭೋಗಗಳಿವೆ. ಆ ಪೈಕಿ ದೇವಾಲಯ- ಪ್ರಾಸಾದ-ಗೃಹಗಳ ನಿರ್ಮಾಣ, ವಾಸ್ತುಶಿಲ್ಪದ ವಿವರವುಳ್ಳ ಮೊದಲನೆಯ ಅಧ್ಯಾಯ ಬಹಳ ದೊಡ್ಡದು. ಇದರಲ್ಲೇ ಮೂರ್ತಿಕೆತ್ತನೆ, ಚಿತ್ರಕಲೆಯ ವಿವರಗಳಿವೆ. ಆ ಬಳಿಕದ ಉಪಭೋಗಗಳಲ್ಲಿ ಅನ್ನ, ಆಭರಣಗಳು-ಮುತ್ತು ರತ್ನಗಳು, ಸುಗಂಧ ದ್ರವ್ಯಗಳು, ಧೂಪದ್ರವ್ಯ ಉಡುಪುಗಳು, ಆಕರ್ಷಕ ಹೂಮಾಲೆಗಳು, ಆಸನ-ರಥಗಳು- ಛತ್ರಿ- ಯಾನ, ಅಂಗಮರ್ದನದ ಕ್ರಮ ಮತ್ತು ಆಟಗಳು ಸೇರಿದಂತೆ ರಾಜನ ಜೀವನಕ್ಕಷ್ಟೇ ಅಲ್ಲದೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ನಾಲ್ಕು ವರ್ಣಗಳಿಗೂ ಹೊಂದುವಂತೆ ಉಪಭೋಗಗಳ ಕರ್ತವ್ಯ, ಜವಾಬ್ದಾರಿ, ಸೂಕ್ಷ್ಮಗಳ ವಿವರಣೆಗಳಿವೆ. ಪಾಕವಿಧಾನಗಳು, ಅದರ ತಯಾರಿ, ಬಡಿಸುವ ಕ್ರಮ, ಪಾನೀಯಗಳ ಕ್ರಮ, ಆರೋಗ್ಯದ ಪಾಲನೆ, ವಿವಿಧ ಬಗೆಯ ಚಿಕಿತ್ಸೆಗಳು, ಹೀಗೆ ಅನೇಕಾನೇಕವಾಗಿ ಇವೆ. ವಸ್ತ್ರೋಪಭೋಗ ಅಧ್ಯಾಯದಲ್ಲಿ ವಿವಿಧ ಪ್ರದೇಶಗಳ ಬಟ್ಟೆಗಳ ವಿವರಗಳು ಕಾಣಸಿಗುತ್ತವೆ. ತಾಂಬೂಲಭೋಗ ಅಧ್ಯಾಯದಲ್ಲಿ ತಾಂಬೂಲ ಸಾಮಗ್ರಿಗಳನ್ನು ಬೆಳೆವ ಪ್ರದೇಶಗಳ ಬಗ್ಗೆ ಮಾಹಿತಿಗಳಿವೆ. ಅನ್ನಭೋಗ ಅಧ್ಯಾಯದಲ್ಲಿ ಇಡ್ಲಿ, ಹೋಳಿಗೆ, ಮಂಡಿಗೆ, ವಡೆ ಮೊದಲಾಗಿ ಹಲವು ರೀತಿಯಾಗಿ ಇಂದಿನ ಕಾಲಕ್ಕೂ ಪ್ರಸಿದ್ಧವಾಗಿರುವ ಸಾಂಪ್ರದಾಯಿಕ ಸಿಹಿತಿಂಡಿ, ಕರಿದ ತಿಂಡಿ ಎಂಬ ಭಕ್ಷ್ಯಭೋಜ್ಯ ಪದಾರ್ಥಗಳನ್ನು, ಮಾಂಸಾಹಾರದ ವಿವರಗಳನ್ನು ಕೂಡಾ ತಿಳಿಸಲಾಗಿದೆ. ವಿವಿಧ ರೀತಿಯ ಔಷಧಿಗಳನ್ನು ಮಾಡುವ ಕ್ರಮ, ಅವು ಸಿಗುವ ದೇಶ, ಎಲೆಗಳನ್ನು ಗುರುತಿಸುವ ಕ್ರಮ, ಋತುಗಳನ್ನು ಗಮನಿಸಿ ಮಾಡಬೇಕಾದಾ ಉಪಚಾರಗಳು, ಮಾನವ-ಪಕ್ಷಿ ಪ್ರಾಣಿಗಳಶರೀರ ಪ್ರಕೃತಿ.., ಹೀಗೆ ಇಲ್ಲಿ ಹೇಳಲಾದ ಆದಿಭೌತಿಕವಾದ ಎಲ್ಲ ಸಾಮಗ್ರಿಗಳನ್ನು ಪಟ್ಟಿ ಮಾಡಹೊರಟರೆ ಒಂದೊಂದು ಅಧ್ಯಾಯವೂ ಕುತೂಹಲಕರ, ವಿಸ್ಮಯಕರ. ಹಾಗೆಯೇ ಮನೋಜ್ಞವಾದ ನಿರೂಪಣೆಯೂ ಕೂಡಾ ನಮ್ಮನ್ನು ಚಕಿತರನ್ನಾಗಿ ಮಾಡಿಬಿಡುತ್ತದೆ. ಮಾನ - ಪ್ರಮಾಣ ವರ್ಗ-ವರ್ಣವನ್ನಾಶ್ರಯಿಸಿ ಮಾನವ ಜೀವನದ ಹಲವು ಮುಖಗಳನ್ನು ಔಚಿತ್ಯಪೂರ್ಣವಾಗಿ ಕಣ್ಣ ಮುಂದೆ ತರುತ್ತದೆ. === ನಾಲ್ಕನೇ ವಿಂಶತಿ === ಇದು ವಿನೋದದ ಅಧ್ಯಾಯಗಳಿಗೆ ಮೀಸಲಾಗಿದೆ. ಕತ್ತಿ, ಗುರಾಣಿ ಮೊದಲಾದ ಶಸ್ತ್ರಗಳು ಮತ್ತು ಧನುರ್ವಿದ್ಯೆಗೆ ಸಂಬಂಧಿಸಿಂತೆ ವಿವಿಧ ಅಸ್ತ್ರಗಳ ಸ್ವರೂಪ, ಅದರ ತಯಾರಿಕೆ, ಸ್ಥಾನಗಳು, ಅವುಗಳನ್ನು ವಿನೋದಕ್ಕೆಂದು ಬಳಸುವ ಕ್ರಮ ಮೊದಲಾದವನ್ನು ಹೇಳಲಾಗಿದೆ. ಬಳಿಕ ಕವಿತ್ವ, ವಾಕ್ಚಾತುರ್ಯ, ಪಾಂಡಿತ್ಯಪೂರ್ಣ ಚರ್ಚೆಗಳ ಶಾಸ್ತ್ರವಿನೋದಾಧ್ಯಾಯ ಇದೆ. ಅನಂತರದಲ್ಲಿ ಪ್ರಾಣಿಪಕ್ಷಿಗಳ ಕ್ರೀಡಾವಿನೋದಗಳು. ಎಂತೆಂಥ ವಿನೋದಗಳು ಅಂದರೆ - ಆನೆ ಸವಾರಿ, ಕುದುರೆ ಸವಾರಿ, ಕುಸ್ತಿ-ಮಲ್ಲವಿನೋದ, ಕೋಳಿ ಕಾಳಗ, ಲಾವಕಿ ಎಂಬ ಬೇಟೆಪಕ್ಷಿಗಳ ಕಾಳಗ, ಟಗರು ಕಾದಾಟಗಳು, ಎಮ್ಮೆ ಕಾಳಗಗಳು, ಪಾರಿವಾಳ ಕಾದಾಟ, ಗಿಡುಗ ಮತ್ತು ನಾಯಿಗಳ ಆಟಗಳು, ಮೀನುಗಾರಿಕೆ ಹಂದಿ-ಜಿಂಕೆ ಮತ್ತು ಪಕ್ಷಿಗಳ ಬೇಟೆ ಮಾಡುವ ೩೧ ಬಗೆಯ ಕ್ರಮಗಳು,.., ಹಾಗೂ ಇವೆಲ್ಲದಕ್ಕೂ ಮಾಡಬೇಕಾದ ತಯಾರಿ, ಪ್ರಾಣಿ ಪಕ್ಷಿಗಳ ಲಾಲನೆ ಪಾಲನೆ, ಆಹಾರ, ತರಬೇತಿಯ ಕ್ರಮ.. ಎಲ್ಲವನ್ನೂ ಹೇಳುತ್ತದೆ. ಇವುಗಳಲ್ಲಿ ಇಂದಿಗೆ ಬಹಳಷ್ಟು ವಿನೋದಗಳು ಬಳಕೆಯಲ್ಲೇ ಇಲ್ಲ. ಮಾನಸೋಲ್ಲಾಸ ಗಾಯನ ಸಂಗೀತ, ವಾದ್ಯಸಂಗೀತ, ನೃತ್ಯ, ಕಥೆ ಹೇಳುವಿಕೆ ಮತ್ತು ಇಂದ್ರಜಾಲಗಳ ಬಗ್ಗೆಯೂ ಸಾಕಷ್ಟು ಬರೆದಿದೆ. ಸಂಗೀತ ಮತ್ತು ನೃತ್ಯದ ವಿಷಯಗಳನ್ನು ವಿನೋದ ವಿಂಶತಿಯ ಹದಿನಾರರಿಂದ ಹದಿನೆಂಟನೆಯ ಅಧ್ಯಾಯಗಳಲ್ಲಿ ಕಾಣಬಹುದು. ಗೀತಾ ವಿನೋದ, ವಾದ್ಯ ವಿನೋದ; ನೃತ್ಯ ವಿನೋದ ಎಂಬ ಶೀರ್ಷಿಕೆಗಳನ್ನ ಇಈ ಅಧ್ಯಾಯಕ್ಕೆ ಕೊಡಲಾಗಿದೆ. ಅಂತೆಯೇ ಕಥೆಗಳನ್ನು ರಸವತಾಗಿ ಬಣ್ಣಿಸುವ ಕಲಾಪ್ರಕಾರಗಳನ್ನು ನೆನಪಿಸುವಂತೆ ಒದಗುವಂಥ ಕಥಾವಿನೋದ, ಜಾದೂಗಾರಿಕೆಯ ಚಮತ್ಕಾರವಿನೋದ ಎಂಬ ಅಧ್ಯಾಯಗಳೂ ಪ್ರಮುಖವಾಗಿವೆ. ಅದರೊಳಗೂ ನೃತ್ಯವಿದ್ಯೆಯ ಬಗ್ಗೆ ಸ್ಥೂಲ ಅವಲೋಕನವನ್ನು ಮಾಡುವುದಾದರೆ- ಸೋಮೇಶ್ವರನಲ್ಲೇ ಮೊದಮೊದಲೆಂಬಂತೆ ಮಾರ್ಗೋತ್ತರ ಕಾಲದಲ್ಲಿ ಪ್ರಸಿದ್ಧವಾಗಿದ್ದ ತಾಂಡವ, ಲಾಸ್ಯ, ವಿಕಟ, ವಿಷಮ, ಲಘು ಮೊದಲಾದ ಆರು ವಿಧಗಳ ನೃತ್ಯಗಳು ಮತ್ತು ಅದನ್ನಾಡುವ ನಟ, ನರ್ತಕಿ, ಕೊಲ್ಲಟಿಕ, ಚಾರಣ, ವೈತಾಳಿಕಾ ಮೊದಲಾದ ಆರು ವಿಧದ ನರ್ತಕರ ವಿಚಾರ ಕಂಡುಬರುತ್ತದೆ. ಮತ್ತು ಇವುಗಳನ್ನು ನರ್ತಿಸುವುದಕ್ಕೆ ಅವಶ್ಯವಿರುವ ಆಂಗಿಕಾಭಿನಯಗಳನ್ನು ಅಂದರೆ ಅಂಗೋಪಾಂಗ ಅಭಿನಯ, ಸ್ಥಾನಕ, ಚಾರಿಗಳನ್ನು ವಿಶೇಷವಾಗಿ ವಿವರಿಸಲಾಗಿದೆ. ಭರತನು ನಾಟ್ಯಶಾಸ್ತ್ರದಲ್ಲಿ ಹೇಳಿದ ವಿಚಾರಗಳನ್ನು ಕೂಡಾ ಎಷ್ಟೋ ಕಡೆ ಪುನರುಕ್ತಿಸಲಾಗಿದೆ. ಮತ್ತು ಆಯಾ ಕಾಲಕ್ಕೆ ವಿಶೇಷವಾಗಿ ಕಂಡುಬರುವ ಲಕ್ಷಣವಿಸ್ತರಣೆಯನ್ನೂ ಕೂಡಾ ಈ ಗ್ರಂಥದಲ್ಲಿ ಪ್ರಪ್ರಥಮವೆಂಬಂತೆ ಕಾಣಬಹುದು. ದೇಶೀ ಎಂದು ಇಂದಿನ ಕಾಲಕ್ಕೆ ಹೆಸರಾದ ಎಷ್ಟೋ ಹೊಸ ಬಗೆಯ ಹೆಸರುಳ್ಳ ಸ್ಥಾನಕ, ಚಾರಿಗಳನ್ನೂ ಮೊದಮೊದಲೆಂಬಂತೆ ತೋರಿಸಿಕೊಡುವ ಗ್ರಂಥ ಮಾನಸೋಲ್ಲಾಸವೇ. ಜೊತೆಗೆ ವಿಕಟ-ವಿಷಮಾದಿ ನೃತ್ಯಗಳಿಗೆ ಬೇಕಿರುವ ಉತ್ಲ್ಪುತಿ ಕರಣಗಳು ಅಂದರೆ ಉತ್ ಪ್ಲುತಿ- ಹಾರುವ ನೆಗೆಯುವ ಚಮತ್ಕಾರಿಕವಾದ ಕರಣಗಳ ಲಕ್ಷಣಗಳು ಕೂಡಾ ಪ್ರಪ್ರಥಮವೆಂಬಂತೆ ಇಲ್ಲಿ ಕಂಡೂಬರುತ್ತವೆ. ಇವೇ ವರ್ಗೀಕರಣಗಳನ್ನು ಮುಂದಿನ ಅದೆಷ್ಟೋ ಶಾಸ್ತ್ರಜ್ಞರು ಅನುಸರಿಸಿ ಬೆಳೆಸುತ್ತಾರೆ. ಈ ವಿಚಾರ ಸುಮಾರು ಐನೂರು ವರುಷಗಳ ಅನಂತರಕ್ಕೂ ಸಿಂಹಭೂಪಾಲ, ಪಂಡರೀಕ ವಿಠಲರ ವರೆಗೂ ಕಂಡುಬರುತ್ತದೆ. ಆದರೆ ಉತ್ಪ್ಲುತಿ ಕರಣಕ್ಕೆ ಸಂಬಂಧಿಸಿದಂತೆ ಈ ಗ್ರಂಥವು ಮಾಡಿದ ವರ್ಗೀಕರಣಗಳು ಈ ಗ್ರಂಥದ ಅನಂತರಕ್ಕೆ ಕಂಡುಬರುವ ಮತ್ತೆಷ್ಟೋ ಗ್ರಂಥಗಳಿಗಿಂತ ಬಹಳ ಮಟ್ಟಿಗೆ ಯುಕ್ತವಾದ ಕ್ರಮವುಳ್ಳವೂ ಆಗಿವೆ. ವಿಚಿತ್ರವೆಂದರೆ ಉತ್ಪ್ಲುತಿ ಕರಣಗಳ ಬಗ್ಗೆ, ನಾಟ್ಯಶಾಸ್ತ್ರದ ಅಂಗೋಪಾಂಗ ಅಭಿನಯಗಳ ಬರೆಯುವ ಸೋಮೇಶ್ವರನ ಗ್ರಂಥದಲ್ಲಿ ನಾಟ್ಯಶಾಸ್ತ್ರದ ಮಾರ್ಗಕರಣಗಳ ವಿಚಾರ ಕಂಡುಬರುವುದಿಲ್ಲ. ಅಷ್ಟನ್ನೆಲ್ಲ ಬರೆದವನು ನಾಟ್ಯಶಾಸ್ತ್ರದ ಕರಣಗಳನ್ನು ಏಕೆ ಹೆಸರಿಸದೇ ಹೋಗಿರಬಹುದು? ಎಂದು ವಿಚಾರ ಮಾಡಿದಾಗ ಬಹುಷಃ ಆ ಭಾಗ ಲುಪ್ತವಾಗಿರಬಹುದು ಎಂದೇ ಈ ಲೇಖಿಕೆಯ ಗ್ರಂಥ ಯಕ್ಷಮಾರ್ಗಮುಕುರ ಅಭಿಪ್ರಾಯಪಡುತ್ತದೆ.<ref>https://www.noopurabhramari.com/yakshamargamukura/</ref> === ಐದನೇ/ ಕೊನೆಯ ವಿಂಶತಿ === ಇದು ೨೦ ಬಗೆಯ ವಿವಿಧ ಕ್ರೀಡಾದಿ ಮನರಂಜನೆಗಳನ್ನು ವಿವರಿಸುತ್ತದೆ. ಭೂಧರ ಕ್ರೀಡೆ ಎಂಬುದರಲ್ಲಿ ಉದ್ಯಾನ ವಿನ್ಯಾಸ, ಸಸ್ಯಗಳು ಮತ್ತು ಅವುಗಳ ಪ್ರಭೇದಗಳು, ಕೃತಕ ಕೊಳಗಳು, ವಿವಿಧ ಬಗೆಯ ಮರಗಳ ಲಕ್ಷಣಗಳು ಮರಗಳನ್ನು ಬೆಳೆಸುವ ಕ್ರಮ, ಬೇಕಾದ ಮಣ್ಣು, ಬೀಜಗಳು, ಸಸ್ಯಗಳು ಮತ್ತು ಮರಗಳ ನಡುವಿನ ಅಂತರ, ಗೊಬ್ಬರವನ್ನು ತಯಾರಿಸುವ ವಿಧಾನಗಳು, ಉದ್ಯಾನವನ್ನು ನಿರ್ವಹಿಸುವ ವಿಧಾನಗಳು, ಹೀಗೆ ಎಷ್ಟೋ ವಿಚಾರಗಳೂ ಇವೆ. ವನಕ್ರೀಡೆಯಲ್ಲಿ ಕೃತಕ ವನಗಳ ನಿರ್ಮಾಣದ ಸಹಿತ ವನವಿಹಾರದ ಎಲ್ಲ ಆಯಾಮಗಳನ್ನು ವಿವರಿಸಲಾಗಿದೆ. ಆಂದೋಲನ ಕ್ರೀಡಾ ಅಂದರೆ ಉಯ್ಯಾಲೆ ಆಟ, ವಿವಿಧ ಬಗೆಯ ನೀರೆರೆಚುವ ಆಟ, ಜಲಕ್ರೀಡೆಗಳು, ಹುಲ್ಲುಗಾವಲು ಮತ್ತು ಮರಳಿನ ದಿಣ್ಣೆಯಲ್ಲಿ ಆಡುವ ಶಾದ್ವಲ ಮತ್ತು ವಾಲುಕಾ ಕ್ರೀಡೆಗಳು, ಬೆಳದಿಂಗಳಿನಲ್ಲಿ ಆಡುವ ಜ್ಯೋತ್ಸ್ನಾ ಕ್ರೀಡಾ, ಸಸ್ಯಗಳು ಸೊಂಪಾಗಿ ಬೆಳೆದಿರುವಲ್ಲಿ ಆಡುವ ಸಸ್ಯಕ್ರೀಡಾ, ಮದಿರಾಪಾನ ಮತ್ತು ಮಾಡುವ ವಿಧಾನ, ಒಗಟು ಬಿಡಿಸುವ ಅಂದರೆ ಪ್ರಹೇಲಿಕೆಗಳ ಕ್ರೀಡೆ, ಚದುರಂಗ, ಪಗಡೆ, ಕವಡೆ, ಮತ್ತು ಚೌಕಾಬಾರ ಇಲ್ಲವೇ ಐದು ಗರಗದಂತೆ ತೋರುವ ಫಂಜಿಕಾಕ್ರೀಡೆ, ಮುಷ್ಟಿಯಿಂದ ಗುದ್ದಿ ಮುರಿಯುವ, ಸೀಳುವ ಅಥವಾ ಹಸ್ತಲಾಘವವನ್ನು ಗಮನಿಸಿ ಆಡುವ ಫಣಿದಾಕ್ರೀಡೆ ಮತ್ತು ಅವುಗಳಿಗೆ ಅವಶ್ಯವಿರುವ ಸಾಮಗ್ರಿ- ಕ್ರಮ-ವಿಧಿಗಳನ್ನು ವಿವರಿಸಲಾಗಿದೆ.
Summary:
Please note that all contributions to enIKSwiki are considered to be released under the Creative Commons Attribution-ShareAlike (see
Enwiki:Copyrights
for details). If you do not want your writing to be edited mercilessly and redistributed at will, then do not submit it here.
You are also promising us that you wrote this yourself, or copied it from a public domain or similar free resource.
Do not submit copyrighted work without permission!
Cancel
Editing help
(opens in new window)
Navigation menu
Personal tools
Not logged in
Talk
Contributions
Log in
Namespaces
Page
Discussion
English
Views
Read
View history
More
Navigation
Main page
Help about MediaWiki
Tools
What links here
Related changes
Special pages
Page information