Editing
ಕರ್ನಾಟಕದ ರಾಮೋತ್ಸವಗಳು
(section)
Jump to navigation
Jump to search
Warning:
You are not logged in. Your IP address will be publicly visible if you make any edits. If you
log in
or
create an account
, your edits will be attributed to your username, along with other benefits.
Anti-spam check. Do
not
fill this in!
== ಬೆಂಗಳೂರಿನ ರಾಮೋತ್ಸವಗಳು == ಮೈಸೂರಿನ ತರುವಾಯ ರಾಮನವಮಿಯ ಹೆಚ್ಚಿನ ಪಾಲುದಾರಿಕೆಯನ್ನು ಪಡೆದದ್ದು ಬೆಂಗಳೂರೆಂಬ ಮಹಾನಗರದ ಸಭಾಗಳೇ. ಹಾಗೆ ನೋಡಿದರೆ ಈ ಸಭಾಗಳು ಪ್ರಾರಂಭವಾಗುವುದಕ್ಕಿಂತಲೂ ಮುಂಚೆ ರಾಮೋತ್ಸವಕ್ಕೆ ಅಡಿಪಾಯ ಹಾಕಿದವರು ತುಲಸೀ ರಾಮದಾಸ ಎಂಬ ಸಂತರು, ಎಪ್ರಿಲ್ ೨, ೧೯೦೮ರಲ್ಲಿ. ಈಗಿನ ಮೆಜೆಸ್ಟಿಕ್ ಸರಹದ್ದಿನಲ್ಲಿ ಬರುವ ಆಗಿನ ಧರ್ಮಾಂಬುದಿ ಕೆರೆಯ ಸನಿಹ ಒಂದು ಬೃಹತ್ತಾದ ತುಳಸೀವನವಿತ್ತು. ಆ ತುಲಸೀತೋಟದಲ್ಲಿದ್ದ ಇತಿಹಾಸ ಪ್ರಸಿದ್ಧ ಕೃಷ್ಣನಾಲಯಕ್ಕೆ ಬಂದು ನೆಲೆಸಿದ ಅವರು ನಿಧಾನವಾಗಿ ರಾಮನ ವಿಗ್ರಹವನ್ನೂ ಪ್ರತಿಷ್ಟಾಪಿಸಿ ರಾಮನವಮಿಯ ಪೂಜೆಗಳಿಗೆ ಮನಮಾಡಿದರು. ಅವರಿಗೆ ಒತ್ತಾಸೆಯಾಗಿ ನಿಂತವರು ನಾಲ್ಕು ಬಾರಿ ಮುನ್ಸಿಪಾಲಿಟಿಯ ಅಧ್ಯಕ್ಷಸ್ಥಾನ ಮೇಯರ್ ಪದವಿಯನ್ನು ಅಲಂಕರಿಸಿದ್ದ ಸಮಾಜಸೇವಾಧುರೀಣ ರಾವ್ ಬಹದ್ದೂರ್ ಲೋಕಸೇವಾಸಕ್ತ ಬಿ.ಕೆ. ಗರುಡಾಚಾರ್. ಇಂದಿನ ಬದಲಾದ ‘ಬ್ಯಾಂಗಲೂರಿ’ನ ಸ್ವರೂಪದ ಒಳಗೂ ಆ ದೇವಾಲಯ ತನ್ನ ಕುರುಹನ್ನು ಉಳಿಸಿಕೊಂಡಿದೆ . ರಾಮನವಮಿಯ ಹಿರಿತನದಲ್ಲಿ ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿರುವ ರಾಮಭಕ್ತ ಭಜನ ಸಭಾ ಬೆಂಗಳೂರಿಗೆ ಅಗ್ರಜ. ಸಂಗೀತ ಮಾತ್ರವಲ್ಲದೆ ಇತರೆ ಎಲ್ಲಾ ಕಲಾಪ್ರಕಾರದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ೧೧೦ ವರ್ಷಗಳನ್ನು ಪೂರೈಸಿರುವ ಈ ಸಭಾ ಮೂಲತಃ ಕೋಲಾರದ ಬೇತಮಂಗಲದ್ದು. ಸಿ.ವಿ ಸುಬ್ಬಾರಾವ್ ಅವರ ನಾಯಕತ್ವದಲ್ಲಿ ೧೯೦೬ರಲ್ಲಿ ಉದ್ಘಾಟನೆಗೊಂಡ ಈ ಸಭಾಕ್ಕೆ ಅತಿಥಿಗಳಾಗಿ ವೀಣೆ ಶೇಷಣ್ಣ, ಅರಿಯಾಕುಡಿ ರಾಮನುಜ ಅಯ್ಯಂಗಾರ್, ಚೆಂಬೈ ವೈದ್ಯನಾಥ ಭಾಗವತರ್, ಕೊಳಲು ಸಂಜೀವರಾವ್ ಭಾಗವಹಿಸಿದ್ದರಂತೆ. ಮೊದಮೊದಲ ಕಾರ್ಯಕ್ರಮಗಳಲ್ಲಿ ಹನುಮದ್ವಿಲಾಸ ರಾಮಾಚಾರ್, ಸೋಸಲೆ ನಾರಾಯಣದಾಸರು, ಬೆಂಗಳೂರು ಕೃಷ್ಣ ಭಾಗವತರು, ಮತ್ತು ಗೋಪಿನಾಥದಾಸರ ಹರಿಕಥಾ ಕಾಲಕ್ಷೇಪಗಳು ಹೇರಳವಾಗಿದ್ದರಿಂದ ಹರಿಕಥೆಗಳಿಗೆ ಈ ಸಭಾ ಹೆಸರುವಾಸಿಯಾಯಿತು. ಅಂತೆಯೇ ಕಳೆದ ೧೧೦ ವರುಷಗಳಿಂದ ಭಜನಾಪ್ರವಾಹಕ್ಕೆ ಸಾಕ್ಷಿಯಾಗಿ ೬೦೦೦ ವಾರಗಳನ್ನು ಪೂರೈಸಿದೆ. ಶ್ರೀರಾಮಸೇವಾ ಮಂಡಲಿಯ ಸಂಗೀತೋತ್ಸದಲ್ಲಿ ಪಾಲ್ಗೊಳ್ಳದೆ ಇದ್ದರೆ ಅದೊಂದು ಕಲಾಜೀವನದ ಕೊರತೆ ಎಂದು ತಮಿಳುನಾಡಿನ ಕಲಾವಿದರು ಕೂಡಾ ಭಾವಿಸುವಂತೆ ಮಾಡಿದ್ದೇ ಕೋಟೆ ಹೈಸ್ಕೂಲ್ ಮೈದಾನದ ರಾಮನವಮಿ ರಾಷ್ಟೀಯ ಸಂಗೀತೋತ್ಸವ. ಮೊದಲಿಗಿದ್ದಿದ್ದು ಸಣ್ಣದಾಗಿ ಚಪ್ಪರದ ಛತ್ರ. ಅದೇ ಇಂದಿಗೆ ಬೃಹತ್ ಪೆಂಡಾಲ್ನಲ್ಲಿ ಸಾವಿರಾರು ಸಂಖ್ಯೆಯ ಕೇಳುಗರಿಗೆ ಸಂಗೀತಸತ್ರ. ಟಿಕೇಟ್ ಇಟ್ಟು ಕಛೇರಿ ನಡೆಸಿದರೂ ಪೂರ್ತಿ ಮೈದಾನ ತುಂಬಿಹೋದ ಉದಾಹರಣೆಗಳೆಷ್ಟೊ. ಚಾಮರಾಜಪೇಟೆಯಲ್ಲಿ ೧೯೩೯ರಲ್ಲಿ ಎಸ್.ವಿ. ನಾರಾಯಣಸ್ವಾಮಿ ರಾವ್ ಅವರು ಶ್ರೀರಾಮಸೇವಾ ಮಂಡಳಿ ಸ್ಥಾಪಿಸಿದರು. ಇವರೊಂದಿಗೆ ಕೈಜೋಡಿಸಿದವರು ಪಿಟೀಲು ಮಾಂತ್ರಿಕರಾದ ಟಿ ಚೌಡಯ್ಯ ಮತ್ತು ಕೊಳಲು ವಿದ್ವಾಂಸ ಟಿ ಆರ್ ಮಹಾಲಿಂಗಂ. ೧೯೫೫ರಲ್ಲಿ ಮೈಸೂರು ಜಯಚಾಮರಾಜೇಂದ್ರ ಒಡೆಯರ್ ರಾಮಸೇವಾ ಮಂಡಳಿ ಸಂಗೀತೋತ್ಸವ ಉದ್ಘಾಟಿಸಿದ್ದಾರೆ. ಇಂದಿಗೂ, ಹಿರಿಯ ಎಂಬ ಭೇಧವಿಲ್ಲದೆ ಕರ್ನಾಟಕ ಮತ್ತು ಹಿಂದೂಸ್ಥಾನೀ ಶೈಲಿಗಳ, ಎಲ್ಲಾ ವರ್ಗ ವಯೋಮಾನದ ಘಟಾನುಘಟಿ ವಿದ್ವಾಂಸರ ಸಂಗೀತ ಕಛೇರಿಗಳು ಇಲ್ಲಿ ನಡೆಸಲ್ಪಡುತ್ತವೆ. ೧೯೫೨ರಿಂದ ಮೊದಲ್ಗೊಂಡು ೧೯೯೨ರವರೆಗೆ ಒಟ್ಟು ಮೂವತ್ತೊಂದು ಕಛೇರಿಗಳನ್ನು ಭಾರತರತ್ನ ಎಂ.ಎಸ್. ಸುಬ್ಬುಲಕ್ಷ್ಮಿ ಇಲ್ಲಿ ನೀಡಿದ್ದಾರೆ. ೧೯೮೦ರ ಸುಬ್ಬುಲಕ್ಷ್ಮಿ ಕಛೇರಿಯನ್ನು ದಕ್ಷಿಣ ಭಾರತದ ಎಲ್ಲ ಆಕಾಶವಾಣಿ ಕೇಂದ್ರಗಳು ಏಕಕಾಲದಲ್ಲಿ ಪ್ರಸಾರ ಮಾಡಿದ್ದವು. ಇನ್ನುಳಿದಂತೆ ಶೇಷಾದ್ರಿಪುರಂ, ಬಸವೇಶ್ವರನಗರದಲ್ಲಿ ನಡೆಯುವ ರಾಮನವಮಿ ಸಂಗೀತೋತ್ಸವಗಳೂ ಪ್ರಖ್ಯಾತವಾಗಿವೆ. ( ಈ ಲೇಖನವು ವಿಜಯಕರ್ನಾಟಕ ಪತ್ರಿಕೆಯ 2017 ರ ರಾಮೋತ್ಸವ ಸಂದರ್ಭ ಪ್ರಕಟವಾಗಿದೆ.<ref>https://www.noopurabhramari.com/ramanavami-sangeetaparva/</ref>)
Summary:
Please note that all contributions to enIKSwiki are considered to be released under the Creative Commons Attribution-ShareAlike (see
Enwiki:Copyrights
for details). If you do not want your writing to be edited mercilessly and redistributed at will, then do not submit it here.
You are also promising us that you wrote this yourself, or copied it from a public domain or similar free resource.
Do not submit copyrighted work without permission!
Cancel
Editing help
(opens in new window)
Navigation menu
Personal tools
Not logged in
Talk
Contributions
Log in
Namespaces
Page
Discussion
English
Views
Read
View history
More
Navigation
Main page
Help about MediaWiki
Tools
What links here
Related changes
Special pages
Page information