Editing
ಪ್ರಾಚೀನ ದೇವಾಲಯಗಳಲ್ಲಿ ನವನಾಥರ ಕೆತ್ತನೆ
(section)
Jump to navigation
Jump to search
Warning:
You are not logged in. Your IP address will be publicly visible if you make any edits. If you
log in
or
create an account
, your edits will be attributed to your username, along with other benefits.
Anti-spam check. Do
not
fill this in!
== ನವನಾಥರು == '''1.''' ಮತ್ಸ್ಯೇಂದ್ರನಾಥ – ಕವಿ ನಾರಾಯಣ 2. ಗೋರಕ್ಷನಾಥ – ಹರಿ ನಾರಾಯಣ 3. ಜಾಲಂದರನಾಥ – ಅಂತರಿಕ್ಷ ನಾರಾಯಣ 4. ಕಾನಿಫನಾಥ – ಪ್ರಬುದ್ಧನಾರಾಯಣ 5. ಗಹನೀನಾಥ – ಕರಭಾಜನ ನಾರಾಯಣ 6. ನಾಗನಾಥ – ಐರಹೋತ್ರ ನಾರಾಯಣ 7. ಚರ್ಪಟಿನಾಥ – ತಿಪ್ಪಲಾಯನ ನಾರಾಯಣ 8. ಭರ್ತರಿನಾಥ – ದ್ರಮಿಲ ನಾರಾಯಣ 9. ರೇವಣನಾಥ – ಚಮಸ ನಾರಾಯಣ [[File:Fig 1 Ma.jpg|alt=Natha sculptures|thumb|'''1. ಮೀನನಾಥ/ಮತ್ಸ್ಯೇಂದ್ರನಾಥ''']] 1. '''ಮೀನನಾಥ/ ಮತ್ಸ್ಯೇಂದ್ರನಾಥ :''' ಈ ನಾಥರು ಮೀನಿನಿಂದ ಜನಿಸಿದನೆಂದು ಹಾಗೂ ಶಿವನಿಂದ ಹಠಯೋಗವನ್ನು ಕಲಿತು ಪೂರ್ಣ ಸಿದ್ಧಿಯನ್ನು ಸಾಧಿಸಿದರೆಂದು ನವನಾಥ ಕಥಾಸಾರದಲ್ಲಿ ತಿಳಿದುಬಂದಿದೆ. ಮೀನನಾಥರು ಮೀನಿನಮೇಲೆ ಅರ್ಧಮತ್ಸ್ಯೇಂದ್ರಾಸನದಲ್ಲಿ ಕುಳಿತಿರುವುದನ್ನು ಕಾಣಬಹುದು. ಬಲ ಅಂಗೈ ಮೀನಿನಮೇಲೆ, ಎಡಗೈ ಎಡಮಂಡಿಯಮೇಲೆ ಇರುವ ಹಾಗೆ ಇದೆ. ಹಾಗೂ ಎಡತೋಳಿನಲ್ಲಿ ತೋಳ್ಬಂದಿ ಜೊತೆ ಜೋಳಿಗೆ ಇರುವುದನ್ನು ನೋಡಬಹದು. ಪಕ್ಕದಲ್ಲಿ ತ್ರಿಶೂಲವೂ ಇರುವುದು. ಬಹುತೇಕ ವಿಜಯನಗರದ ಕಾಲದ ದೇವಸ್ಥಾನಗಳಲ್ಲಿ ಕಂಡುಬರುವ ಶಿಲ್ಪವಿದು. [[File:Fig 2 GO.jpg|alt=Natha sculptures|thumb|'''2. ಗೋರಕ್ಷನಾಥ''']] 2. '''ಗೋರಕ್ಷನಾಥ :''' ಇವರು ಭಸ್ಮದಿಂದ ಜನಿಸಿದರೆಂದು ಪ್ರತೀತಿ ಇದೆ. ಇವರು ಶಿವನ ಅವತಾರದ ಪ್ರತಿರೂಪವೆಂದು ನಂಬಿಕೆಯಿದೆ. ಇಲ್ಲಿ ಹುಲಿಯು ವೈರಾಗ್ಯ ಹಾಗೂ ಹಠದ ಪ್ರತೀಕ ಎಂದು ನಂಬಲಾಗಿದೆ. ಇವರು ಹುಲಿಯ ಮೇಲೆ ಅರ್ಧಮತ್ಸ್ಯೇಂದ್ರಾಸನದಲ್ಲಿ ಕುಳಿತಿರುವುದನ್ನು ಕಾಣಬಹುದು. ಅವರ ತಲೆಯೂ ಕೆಳಕ್ಕೆ ಮುಖಮಾಡಿ ಬಲಮಂಡಿಯಮೇಲೆ ವಿಶ್ರಾಂತಿಯಲ್ಲಿದೆ. ಇವರು ಕರ್ಣಕುಂಡಲ ಹಾಗೂ ಮಣಿಕಟ್ಟಿನಲ್ಲಿ ಕಡಗ ಧರಿಸಿರುವುದನ್ನು ಗುರುತಿಸಬಹುದಾಗಿದೆ. [[File:Fig 3 Jal.jpg|alt=Natha sculptures|thumb|'''3. ಜಾಲಂಧರನಾಥ''']] 3.'''ಜಾಲಂಧರನಾಥ :''' ಇವರು ಬೆಂಕಿಯಿಂದ ಜನಿಸಿದರೆಂದು ನವನಾಥ ಕಥಾಸಾರದಿಂದ ತಿಳಿದುಬಂದಿದೆ. ಇಲ್ಲಿ ಸಿಂಹವು ರಾಜಗಾಂಭೀರ್ಯದ ಸಂಕೇತವಾಗಿ ಹೋಲಿಸಲಾಗಿದೆ. ರಾಜಲೀಲಾಸನದಲ್ಲಿ ಸಿಂಹದ ಮೇಲೆ ಕುಳಿತಿರುವುದನ್ನು ಕಾಣಬಹುದು. ಬಲಗೈ ಬಲತೊಡೆಯ ಮೇಲೆ ಹಾಗೂ ಎಡಗೈ ಎಡಮಂಡಿಯ ಮೇಲೆ, ತಲೆಯು ಎಡತೋಳಿನ ಮೇಲೆ ವಿಶ್ರಾಂತಿಯಲ್ಲಿರುವಂತೆ ಕಾಣುವುದು. [[File:Fig 4 Kanipha.jpg|alt=Natha sculptures|thumb|'''4. ಕಾನಿಫನಾಥ''']] 4. '''ಕಾನಿಫನಾಥ :''' ಇವರು ಶಿವನ ಇಚ್ಛೆಯಂತೆ ಗಜದ ಕಿವಿಯಿಂದ ಜನಿಸಿದರೆಂದು ನವನಾಥ ಕಥಾಸಾರವು ಹೇಳುತ್ತದೆ. ಇಲ್ಲಿ ಗಜಯಾಳಿಯು ಶಕ್ತಿ ಹಾಗೂ ಜ್ಞಾನವನ್ನು ಬಿಂಬಿಸುತ್ತದೆ. ನಾಥನು ಗಜಯಾಳಿಯ ಮೇಲೆ ಕುಳಿತಿರುವುದನ್ನು ಕಾಣಬಹುದಾಗಿದೆ. ಯಾಳಿಯು ಬಲಗಡೆ ಮುಖಮಾಡಿ ನಾಥನ ಮುಖವು ಎಡಕ್ಕೆ ಕೆಳಮುಖ ಮಾಡಿರುವ ಹಾಗೆ ಇರುವುದು ಹಾಗೂ ನಾಥನ ಬಲ ಕೈ ಬಹುಶಃ ಅಭಯಹಸ್ತ ಹಿಡಿದಿರುವ ಹಾಗೆ, ಎಡಗೈ ಇಳಿಬಿಟ್ಟಂತೆ ಇರುವುದನ್ನು ಕಾಣಬಹುದಾಗಿದೆ. [[File:Fig 5- Gah.jpg|alt=Natha sculptures|thumb|5. '''ಗಹನೀನಾಥ''']] 5. '''ಗಹನೀನಾಥ :''' ವಿಷ್ಣು ಭೂಮಿಯನ್ನುಕಾಪಾಡಲು ವರಾಹ ಅವತಾರ ತಾಳಿದಂತೆ, ಇವರು ಗೋರಕ್ಷನಾಥರ ಸಂಜೀವಿನಿ ಮಂತ್ರದಿಂದ ಮಣ್ಣಿನ ಪ್ರತಿಮೆಯಲ್ಲಿ ಜನಿಸಿದ ಕಾರಣ, ಇಲ್ಲಿ ವರಾಹವು ಅವರ ಸಂಕೇತ ಎಂಬುದು ನನ್ನ ಅನಿಸಿಕೆಯಾಗಿದೆ. ಇವರು ಅರ್ಧಮತ್ಸ್ಯೇಂದ್ರಾಸನದಲ್ಲಿ ಕುಳಿತಿರುವರು., ಬಲಗೈ ಬಲಮಂಡಿಯ ಮೇಲೆ ಇರುವುದು. ಎಡಗೈ ವರಾಹದ ಮೇಲೆ ಇರುವುದು; ಎರಡು ಮಣಿಕಟ್ಟಿ ನಲ್ಲಿ ಕಡಗ ತೊಡಿಸಿಕೊಂಡಿರುವುದನ್ನು ಕಾಣಬಹುದು. [[File:Fig 6 Naga.jpg|alt=Natha sculptures|thumb|6. '''ನಾಗನಾಥ/ ಐರಹೋತ್ರ''']] 6. '''ನಾಗನಾಥ/ ಐರಹೋತ್ರ :''' ಇವರು ಹಾವಿನ ಮೊಟ್ಟೆಯಿಂದ ಜನಿಸಿರುವುದಾಗಿ ನವನಾಥ ಕಥಾಸಾರದಲ್ಲಿ ತಿಳಿದುಬಂದಿದೆ . ಇಲ್ಲಿನ ಅವರ ವಾಹನ ಸರ್ಪವು ಅವರ ಜನ್ಮವನ್ನು ಸೂಚಿಸುತ್ತದೆ . ಇವರು ರಾಜಲೀಲಾಸನದಲ್ಲಿ ಎಡಬದಿ ತಿರುಗಿರುವ ಸರ್ಪದಮೇಲೆ ಕುಳಿತಿರುವರು. ಇವರು ಜೋಳಿಗೆ ಧರಿಸಿರುವುದನ್ನು ಕಾಣಬಹುದು. ಇವರ ಎಡಗೈ ಎಡ ತೊಡೆಯ ಮೇಲೆ ಹಾಗೂ ಬಲಗೈ ಬಲಮಂಡಿಯಮೇಲೆ/ ಡೋಲದಲ್ಲಿ ವಿಶ್ರಾಂತಿಯಲ್ಲಿದೆ. ತೋಳ್ಬಂದಿ ಹಾಗೂ ಮಣಿಕಟ್ಟಿನಲ್ಲಿ ಕಡಗ/ಕಂಕಣ ಧರಿಸಿರುವರು. ಎದೆಗೆ ಪಟ್ಟಿಹಾಕಿರುವ ಹಾಗೆ ಗುರುತಿಸಬಹುದು. ಈ ಶಿಲ್ಪವು ಕೂಡಾ ವಿಜಯನಗರ ಕಾಲದ ದೇವಸ್ಥಾನಗಳ ಕಂಬಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. [[File:Fig 7- Cha.jpg|alt=Natha sculptures|thumb|'''7.ಚರ್ಪಟಿನಾಥ''']] 7. '''ಚರ್ಪಟಿನಾಥ :''' ಇವರು ಬ್ರಹ್ಮನ ವೀರ್ಯದಿಂದ ಭಾಗೀರಥಿ ನದಿಯ ದಡದಲ್ಲಿ ಜನಿಸಿದರೆಂದು ನವನಾಥ ಕಥಾಸಾರವು ತಿಳಿಸುತ್ತದೆ . ಇಲ್ಲಿ ನಾಥನು ಅರ್ಧಪರಿಯಂಕಾಸನಾದಲ್ಲಿ ಕೂರ್ಮದ ಮೇಲೆ ವಿಶ್ರಾಂತ ಸ್ಥಿತಿಯಲ್ಲಿ ಕುಳಿತಿರುವುದನ್ನು ಹಾಗೂ ಇಲ್ಲಿ ಕೂರ್ಮವು ಮನಸ್ಸಿನ ಸಮಸ್ಥಿತಿಯನ್ನು ತೋರಿಸುವ ಪ್ರತೀಕವಾಗಿದೆ. ಇವರ ತಲೆಯು ತನ್ನ ಬಲ ಅಂಗೈ ಮೇಲೆ ಇರುವುದು, ಬಲಗಾಲು ಕೂರ್ಮದಮೇಲೆ, ಎಡಗೈ ಎಡಗಾಲಿನ ಮೇಲೆ ಹಾಗೂ ಅವರ ಕೇಶವು ಜಡೆಕಟ್ಟಿರುವುದೋ ಎಂಬಂತೆ ಭಾಸವಾಗುತ್ತದೆ. ಅವರು ಜನಿವಾರದ ಜೊತೆಗೆ ಕೊರಳ ಹಾರವನ್ನು ಧರಿಸಿರುವುದನ್ನು ಕಾಣಬಹುದು. [[File:Fig 8.Chow.jpg|alt=Natha sculptures|thumb|8. '''ಚೌರಂಗಿನಾಥ / ಭರ್ತರಿನಾಥ''']] 8. '''ಚೌರಂಗಿನಾಥ / ಭರ್ತರಿನಾಥ :''' ಜಿಂಕೆಯು ತನ್ನ ಮರಿಗಳೊಂದಿಗೆ ಇವರನ್ನು ಏಳು ವರ್ಷಗಳವರೆಗೆ ಸಾಕಿರುವುದಾಗಿ ನವನಾಥ ಕಥಾಸಾರದಿಂದ ತಿಳಿದುಬಂದಿದೆ. ಇಲ್ಲಿ ಜಿಂಕೆಯೂ ಜ್ಞಾನ ಹಾಗೂ ಚಾತುರ್ಯದ ಸಂಕೇತವಾಗಿದೆ. ಇಲ್ಲಿ ಇವರು ಜಿಂಕೆಯಮೇಲೆ ಕುಳಿತು ಅದರ ಕೊಂಬನ್ನು ಬಲಗೈಯಲ್ಲಿ ಹಿಡಿದು ಹಾಗೂ ಬಾಯಿಯ ಬಳಿ ಎಡಗೈ ಹಿಡಿದಿರುವ ಹಾಗೆ ಕಾಣಬಹುದಾಗಿದೆ. [[File:Fig 9 Reva.jpg|alt=Natha sculptures|thumb|9. '''ರೇವನಾಥ / ರೇವಣನಾಥ''']] 9. '''ರೇವನಾಥ / ರೇವಣನಾಥ :''' ಇವರು ಬ್ರಹ್ಮನ ವೀರ್ಯದಿಂದ ರೇವಾನದಿಯ ದಡದಲ್ಲಿ ಜನಿಸಿದರೆಂದೂ, ಗುರು ದತಾತ್ರೇಯರಿಂದ ಮಂತ್ರ ಶಕ್ತಿಯನ್ನು ಪಡೆದು ಜ್ಞಾನ ಹಾಗೂ ಸಿದ್ಧಿಯನ್ನು ಪಡೆದು ಜನರ ಕಷ್ಟಪರಿಹಾರ ಮಾಡಿದರೆಂದೂ ಪ್ರತೀತಿಯಿದೆ. ಇಲ್ಲಿನ ವಾಹನ ವೃಶ್ಚಿಕವೂ ಜ್ಞಾನ ಮತ್ತು ನಿರ್ಭಯವನ್ನು ಸೂಚಿಸುತ್ತದೆ . ನಾಥರು ವೃಶ್ಚಿಕದ ಮೇಲೆ ಅರ್ಧಮತ್ಸ್ಯೇಂದ್ರಾಸನದಲ್ಲಿ ಕುಳಿತಿರುವನು. ಇವರ ಬಲಗೈಯನ್ನು ಬಾಯಿಯ ಬಳಿ ಹಿಡಿದಿರುವ ಹಾಗೆ, ಎಡಗೈ ಎಡತೊಡೆಯ ಮೇಲೆ, ತೋಳಿನಲ್ಲಿ ಜೋಳಿಗೆ ಹಿಡಿದಿರುವ ಹಾಗೆ ಕಾಣುತ್ತದೆ. ದೊಡ್ಡದಾದ ಕರ್ಣ ಕುಂಡಲಗಳು , ಕೊರಳ ಹಾರದ ಆಭರಣ, ಜನಿವಾರ ಹಾಗೂ ಎದೆಯ ಮೇಲೆ ಪದಕ ಹಾಗೂ ಪಕ್ಕದಲ್ಲಿ ತ್ರಿಶೂಲವು ಇರುವುದನ್ನು ಕಾಣಬಹುದು.''' '''
Summary:
Please note that all contributions to enIKSwiki are considered to be released under the Creative Commons Attribution-ShareAlike (see
Enwiki:Copyrights
for details). If you do not want your writing to be edited mercilessly and redistributed at will, then do not submit it here.
You are also promising us that you wrote this yourself, or copied it from a public domain or similar free resource.
Do not submit copyrighted work without permission!
Cancel
Editing help
(opens in new window)
Navigation menu
Personal tools
Not logged in
Talk
Contributions
Log in
Namespaces
Page
Discussion
English
Views
Read
View history
More
Navigation
Main page
Help about MediaWiki
Tools
What links here
Related changes
Special pages
Page information