Editing
ನಂದಿಕೇಶ್ವರನ ಭರತಾರ್ಣವ
(section)
Jump to navigation
Jump to search
Warning:
You are not logged in. Your IP address will be publicly visible if you make any edits. If you
log in
or
create an account
, your edits will be attributed to your username, along with other benefits.
Anti-spam check. Do
not
fill this in!
== ಅಧ್ಯಾಯಕ್ರಮ ಮತ್ತು ಲಕ್ಷಣ ವಿಚಾರ == ಈ ಗ್ರಂಥವು ಸಂಗ್ರಹಸ್ವರೂಪದಲ್ಲಿರುವ ಕಾರಣಕ್ಕೇ ಏಕಾಏಕಿ ೨೭ ಅಸಂಯುತ ಹಸ್ತಗಳ ಅಂದರೆ ಒಂದೇ ಕೈಯಲ್ಲಿ ಮಾಡುವ ಹಸ್ತಾಭಿನಯಗಳ ಲಕ್ಷಣ ಮತ್ತು ವಿನಿಯೋಗಗಳನ್ನು ಹೇಳುತ್ತದೆ. ಎರಡನೇ ಅಧ್ಯಾಯ ೧೬ ಸಂಯುತ ಹಸ್ತಗಳನ್ನು ಅಂದರೆ ಎರಡು ಕೈಗಳ ಸಂಯೋಜನೆಯಿಂದ ಮಾಡುವ ಹಸ್ತಾಭಿನಯವನ್ನು ಚರ್ಚಿಸುತ್ತದೆ. ಇದರಲ್ಲಿನ ಅಸಂಯುತ ಹಸ್ತಲಕ್ಷಣಗಳಲ್ಲಿ ಮಂಡಲನೃತ್ಯ, ಪ್ರಾಣನೃತ್ತ, ಮುಖಚಾಲಿ; ಹಾಗೂ ಸಂಯುತ ಹಸ್ತಲಕ್ಷಣಗಳಲ್ಲಿ ಹಸ್ತಚಾರಬಂಧ, ಭೂಚಾರಿನಟನ ಎಂಬ ದೇಶೀನೃತ್ಯಗಳ ಉಲ್ಲೇಖವಿದೆ. ಇವೆಲ್ಲವೂ ಸಾಮಾನ್ಯವಾಗಿ ೧೨ರಿಂದ ೧೬ನೇ ಶತಮಾನದೊಳಗೆ ಪ್ರಯುಕ್ತವಾಗುವ ನೃತ್ಯಬಂಧಗಳಾಗಿರುವುದರಿಂದ ಭರತಾರ್ಣವ ಅರ್ವಾಚೀನ ಎನ್ನುವುದಲ್ಲಿ ಸಂಶಯವಿಲ್ಲ. ಹಾಗೆಯೇ ನೃತ್ತಹಸ್ತಗಳ ವಿನಿಯೋಗದ ವೇಳೆ ಮುಖನಾಟ್ಯ, ಛಲಿಯನೃತ್ಯ, ಭ್ರಮರಿನೃತ್ಯ, ವಿದ್ಯುತ್ಭ್ರಮಣ, ಮಹಾಭ್ರಮಣ, ಮಂಡಿ, ಲಲಿತ, ಸಮೋತ್ಸರಿತ ಮಂಡಲ, ಕರ್ತರೀನರ್ತನ, ಕುಂಡಲೀ ನಾಟ್ಯ, ಚಂಡಿಕೆ-ಶಿವರ ಯುಗಳನೃತ್ಯ.. ಹೀಗೆ ಇನ್ನೂ ಹಲವು ಬಗೆಯಾಗಿ ದೇಶೀ ನೃತ್ಯಗಳನ್ನೂ ಹೆಸರಿಸಿದೆಯಾದರೂ ಈ ನೃತ್ಯಗಳ ಕುರಿತಂತೆ ಹೆಚ್ಚಿನ ವಿವರಗಳು ಈ ಗ್ರಂಥಸಂಗ್ರಹದೊಳಗೆ ಮತ್ತೆಲ್ಲಿಯೂ ಕಂಡುಬರುವುದಿಲ್ಲ. ಹಾಗೆಯೇ ಬೃಹಸ್ಪತಿ ಹೇಳಿದನೆನ್ನಲಾದ ಅಂಗೋಪಾಂಗ ವಿವರಗಳು ಅಂದರೆ ಶಿರೋಭೇದ, ದೃಷ್ಟಿಭೇದ ಮತ್ತು ಪಾದಭೇದಗಳು, ಚಾರಿಗಳು ಅಂದರೆ ಚಲನೆಗಳು, ಸ್ಥಾನಕಗಳು ಅಂದರೆ ನಿಲ್ಲುವ ಭಂಗಿಯ ಕ್ರಮ, ಕಣ್ಣಿನ ಮೂಲಕ ಅಭಿವ್ಯಕ್ತಿಪಡಿಸುವ ರಸದೃಷ್ಟಿ, ಸ್ಥಾಯಿಭಾವ ದೃಷ್ಟಿ, ಸಂಚಾರಿಭಾವದೃಷ್ಟಿ, ಎಂಬ ವಿಭಾಗಗಳನ್ನು ಅನಂತರದ ಅಧ್ಯಾಯಗಳಲ್ಲಿ ಹೇಳಲಾಗಿದೆ. ಏಳನೇ ಅಧ್ಯಾಯದಲ್ಲಿ ತಾಳನಾಮಾಂಗಗಳನ್ನೂ, ೧೧೨ ದೇಶೀ ತಾಳಗಳ ಉಲ್ಲೇಖವನ್ನು ಮಾಡಲಾಗಿದೆ. ೮ನೇ ಅಧ್ಯಾಯವು ಸುಮತಿಯೆಂಬಾತನು ವಿವಿಧ ಚಾರಿ ಅಂದರೆ ಚಲನೆಯನ್ನು ಕಲಿಸಿಕೊಡಲು ನಂದಿಕೇಶ್ವರನೊಂದಿಗೆ ಸಂವಾದ ನಡೆಸುವ ಸನ್ನಿವೇಶದ ಮೂಲಕ ಆರಂಭಗೊಳ್ಳುತ್ತದೆ. ಈ ಸುಮತಿ ಇಂದ್ರ ಎಂಬ ಅಭಿಪ್ರಾಯವಿದೆ. ೯ನೇ ಅಧ್ಯಾಯವು ೯ ಬಗೆಯ ಅಂಗಹಾರ ಅಂದರೆ ಕರಣಗಳೆಂಬ ಆಂಗಿಕಾಭಿನಯವಿಧಾನಗಳ ಒಂದು ಸಂಯೋಜನಾ ಗುಚ್ಛಗಳನ್ನು ಪ್ರಸ್ತಾಪಿಸುತ್ತದೆ ಎಂದು ಹೇಳಿದರೂ ಇಲ್ಲಿನ ಅಂಗಹಾರದ ವ್ಯಾಖ್ಯೆ ನಾಟ್ಯಶಾಸ್ತ್ರಕ್ಕಿಂತ ಬೇರೆಯೇ ಆಗಿದೆ. ಜೊತೆಗೆ ಅಂಗಹಾರದ ಶೈಲಿಗಳನ್ನು ಒಂಭತ್ತು ರಸಗಳಿಗೆ ಅನುಗುಣವಾಗಿ ವಿಭಾಗಿಸಿ ಭಾವಪ್ರಚೋದಕವೆಂದೂ ಹೇಳಲಾಗಿದೆ. ಇವನ್ನು ಬೆಳಗ್ಗಿನ ಕಾರ್ಯಕ್ರಮಗಳಲ್ಲಿ ನರ್ತಿಸುವ ವಾಡಿಕೆ ಎಂದೂ ಹೇಳಲಾಗಿದ್ದು; ಅಭಿನಯದ ತರುವಾಯ ಕೆಲವು ಭಂಗಿಗಳನ್ನು ಶುದ್ಧನೃತ್ತದೊಂದಿಗೆ ಹೊಂದಿಸಲ್ಪಟ್ಟು ಮಾಡುವ ಕ್ರಮವೇ ಇದರ ಹುಟ್ಟಿಗೆ ಕಾರಣವೆನ್ನಲಾಗಿದೆ. ಇವುಗಳೆಲ್ಲಾ ಪಾರ್ವತೀದೇವಿ ಪ್ರಯುಕ್ತ ಗ್ರಂಥದ ಜನ್ಯವೆಂಬುದಾಗಿ ಉಲ್ಲೇಖಿಸಲಾಗಿದೆ. ಒಟ್ಟಿನಲ್ಲಿ ಸಂಗೀತರತ್ನಾಕರದಲ್ಲಿ ಸ್ಪಷ್ಟರೀತಿಯಿಂದ ಕಾಣಸಿಗುವ ಮಾರ್ಗೋತ್ತರ ಕಾಲದ ಅಂಗಭೇದ, ದೇಶೀ ಚಾರಿ ಮತ್ತು ಕರಣಗಳೂ ಕೂಡಾ ಅಲ್ಲಲ್ಲಿ ಎಲ್ಲೆಂದರಲ್ಲಿ ಸೂಕ್ತ ವಿವರಗಳಿಲ್ಲದೆ ಕಂಡುಬರುತ್ತವೆ. ೧೦ನೇ ಅಧ್ಯಾಯಕ್ಕೆ ೧೦ ಬಗೆಯ ನಾನಾರ್ಥ ಹಸ್ತಗಳನ್ನು ಪ್ರಸ್ತಾಪಿಸಲಾಗಿದ್ದು ಇವುಗಳೂ ಅಂಗಹಾರದಂತೆಯೇ ಪಾರ್ವತೀದೇವಿಪ್ರಯುಕ್ತ ಭರತಚಂದ್ರಿಕಾದಿಂದ ಕಲಿಸಲ್ಪಟ್ಟದ್ದು ಎಂಬಲ್ಲಿಗೆ ಈ ಗ್ರಂಥದ ಸಂಗ್ರಹಕಾರ ಮತ್ತೊಂದು ಗ್ರಂಥಕ್ಕೆ ಋಣಿಯಾಗಿದ್ದಾನೆನ್ನಬಹುದು. ೯ರಿಂದ ೧೨ನೇ ಅಧ್ಯಾಯದವರೆಗೂ ೯ ಬಗೆಯಾದ ಶೃಂಗನಾಟ್ಯವೆಂಬ ಒಂದು ವಿಶಿಷ್ಟ ಶೈಲಿಯ ನೃತ್ಯ, ಮತ್ತು ಅದರ ನೃತ್ಯತಂತ್ರಗಳು ಸುಮತಿಯ ಪ್ರಾರ್ಥನೆಗನುಸಾರವಾಗಿ ನಂದಿಕೇಶ್ವರನು ಹೇಳುವ ಕತೆಯ ಮೂಲಕ ಕಂಡುಬರುತ್ತವೆ. ೧೩ನೇ ಅಧ್ಯಾಯದಲ್ಲಿ ಸಪ್ತಲಾಸ್ಯಗಳ ಬಗ್ಗೆ ನಂದಿಕೇಶ್ವರನು ಸುಮತಿಗೆ ಹೇಳುವ ಸನ್ನಿವೇಶವಿದ್ದು; ಮಹರ್ಷಿ ಯಾಜ್ಞವಲ್ಕ್ಯನು ಈ ನೃತ್ಯದಲ್ಲಿ ನಿಷ್ಣಾತನೆಂದು ತಿಳಿಸುತ್ತಾನೆ. ದೇಶೀ ಲಾಸ್ಯಕ್ರಮವನ್ನು ಚಾರ್ಯಾಲಂಕಾರ ನಟನ ಅಥವಾ ಸಪ್ತಲಾಸ್ಯವೆಂದು ಹೆಸರಿಸಲಾಗಿದ್ದು; ವಿವಿಧ ದೇವತೆಗಳು ವಿವಿಧ ನೃತ್ಯಗಳನ್ನು ಸೃಷ್ಟಿಸಿದ ಕಥೆಗಳೆಲ್ಲವೂ ಇವೆ. ಒಟ್ಟಿನಲ್ಲಿ ನಾಟ್ಯಶಾಸ್ತ್ರಕ್ಕಿಂತ ಭಿನ್ನವಾಗಿ ತಾಂಡವ ಮತ್ತು ಲಾಸ್ಯದ ಲಕ್ಷಣ ವರ್ಗೀಕರಣಗಳು ಬಹಳ ಕಂಡುಬರುತ್ತವೆ. ೧೪ನೇ ಅಧ್ಯಾಯದಲ್ಲಿ ತಾಂಡವಕ್ಕೆ ಸಂಬಂಧಿಸಿದ ಗತಿ, ಕರಣ, ಚಾರಿಗಳ ಬಗ್ಗೆ ಉಲ್ಲೇಖಗಳಿವೆ. ಇವೆಲ್ಲ ಅಧ್ಯಾಯಗಳ ಮಧ್ಯೆ ಮಧ್ಯೆ ದೇಶಿಕರಣಗಳ ಉಲ್ಲೇಖವಿದೆಯಾದರೂ ಅದನು ನರ್ತಿಸುವ ಪಾಠ್ಯವನ್ನು ನೀಡಲಾಗಿಲ್ಲ. ಇಂತಹ ಕರಣಗಳು ಪಾಟಾಕ್ಷರಗಳಿಂದ ಕೂಡಿದ್ದು; ನೃತ್ಯೋತ್ಸವಗಳು ಮುಗಿದ ಮೇಲೆ ಅದರಿಂದ ನೃತ್ಯಗಳನ್ನು, ತಾಳ, ಪಾಟಾಕ್ಷರಗಳನ್ನು, ಅದರ ಕ್ರಮ, ಹೆಸರು, ರೂಪ ಚಲನಾಕ್ರಮವನ್ನು ಆಯ್ದುಕೊಂಡು ಬರೆದೆ ಎನ್ನುತ್ತಾನೆ. ಇವುಗಳನ್ನು ಒಟ್ಟಾಗಿ ಕರಣಭೂಷಣವೆಂದು ಕರೆಯಲಾಗಿದ್ದು; ಇದನ್ನು ಮೊದಲಿಗೆ ಬೃಹಸ್ಪತಿಗೆ ಹೇಳಿಕೊಡಲಾಯಿತು ಎಂದೂ ತಿಳಿಸುತ್ತಾನೆ. ಅಂತೂ ಭರತಾರ್ಣವಕ್ಕಿಂತಲೂ ಮೊದಲಿಗೆ ನಂದಿಕೇಶ್ವರನು ಕರಣಭೂಷಣವೆಂಬ ಗ್ರಂಥವನ್ನು ಬರೆದಿದ್ದನೆಂದೂ, ಅದರಿಂದ ಕೆಲವೊಂದು ವಿಚಾರಗಳನ್ನು ಈ ಗ್ರಂಥಕ್ಕೂ ಆರಿಸಲಾಗಿದೆಯೆಂದು ತಿಳಿದುಬರುತ್ತದೆ. ಹಾಗೆಯೇ ಗ್ರಂಥ ಮುಕ್ತಾಯದ ಭಾಗಗಳಲ್ಲಿ ಗುಹೇಶಭರತ ಲಕ್ಷಣ ಸಮಾಪ್ತಂ ಎಂದಿರುವುದನ್ನು ಗಮನಿಸಿದರೆ ಸ್ಕಂದಭರತ ಎಂಬ ಗ್ರಂಥವನ್ನೂ ಪರಾಮರ್ಶಿಸಲಾಗಿದೆ ಎಂಬುದು ಸ್ಪಷ್ಟಪಡುತ್ತದೆ. ಭರತಾರ್ಣವದ ಸಂಪಾದಕರಾದ ವಾಸುದೇವ ಶಾಸ್ತ್ರಿಗಳ ಪ್ರಕಾರ ಭರತ ಸೇನಾಪತಿಯೆಂಬ ತಮಿಳು ಗ್ರಂಥವೂ ಗುಹೇಶಭರತಲಕ್ಷಣಮ್ ಎಂಬಂತೆ ಕಂಡುಬಂದಿದೆ. ಗ್ರಂಥಾಂತ್ಯದಲ್ಲಿ ಒಂದಷ್ಟು ಅನುಬಂಧದ ವಿಚಾರಗಳನ್ನೂ ನೀಡಲಾಗಿದೆ. ಒಟ್ಟಿನಲ್ಲಿ ಇವೆಲ್ಲ ಲಕ್ಷಣಗಳು, ಕಥೆಗಳೂ ಈ ಗ್ರಂಥವನ್ನು ನಾಟ್ಯಶಾಸ್ತ್ರಕ್ಕಿಂತ ಪ್ರಾಚೀನ ಎಂದು ನಿರೂಪಿಸುವಂತೆ ಕಾಣಿಸುತ್ತದೆಯಾದರೂ; ನಾಟ್ಯಶಾಸ್ತ್ರಕ್ಕಿಂತ ಬಹುದೂರಕ್ಕೆ ಇತ್ತೀಚಿನ ಮಧ್ಯಕಾಲಗಳಲ್ಲಿ ಈ ಗ್ರಂಥ ರಚನೆಯಾಗಿದೆ ಎನ್ನುವುದನ್ನು ಮತ್ತದೇ ಇದರ ಕಥೆ- ಲಕ್ಷಣ ಕ್ರಮಗಳಿಂದ ಅಂದಾಜಿಸಬಹುದು. ಅಂದರೆ ಪುರಾಣಪುರುಷರನ್ನು, ದೇವತೆಗಳನ್ನು ಉಲ್ಲೇಖಿಸಿದರೂ ಇದು ತೀರಾ ಅರ್ವಾಚೀನ ಗ್ರಂಥ ಎಂಬುದು ಸಾಬೀತುಪಡುತ್ತದೆ. ಅನೇಕ ನೃತ್ಯಶಾಸ್ತ್ರಗ್ರಂಥಗಳಲ್ಲಿ ಭರತಾರ್ಣವ ಪ್ರಸ್ತಾವಿಸುವ ವಿಷಯಗಳು ಯಥಾವತ್ತಾಗಿ ಅಥವಾ ಹೋಲಿಸುವಂತೆ ಕಂಡುಬಂದಿವೆ. ಉದಾಹರಣೆಗೆ ೧೯ನೇ ಶತಮಾನದ್ದೆನ್ನಲಾದ ಭರತಕಲ್ಪಲತಾಮಂಜರಿ, ರಸಿಕಜನಮನೋಲ್ಲಾಸಿನಿ ಸಾರಸಂಗ್ರಹ ಭರತಶಾಸ್ತ್ರಮು ಎಂಬಿವೇ ಮೊದಲಾದ ಅನೇಕ ಸಂಗ್ರಹ ಗ್ರಂಥಗಳಲ್ಲಿ ಭರತಾರ್ಣವದ ಲಕ್ಷಣಶ್ಲೋಕಗಳು ಇವೆ. ಮಹಾಮಹೋಪಾಧ್ಯಾಯ ಡಾ. ರಾ.ಸತ್ಯನಾರಾಯಣ ಭರತಕಲ್ಪಲತಾ ಮಂಜರಿ ಮತ್ತು ರಸಿಕಜನಮನೋಲ್ಲಾಸಿನಿ ಸಾರಸಂಗ್ರಹದಿಂದ ಆಯ್ದು ಭರತಾರ್ಣವದಲ್ಲಿ ಸಂಗ್ರಹಿಸಲಾಗಿದೆ ಎಂದೂ ಅಭಿಪ್ರಾಯಿಸಿರುವುದಿದೆ. ಈ ಮೂರೂ ಗ್ರಂಥಗಳನ್ನು ಪರಿಶೀಲಿಸಿದರೆ ಅವರ ಹೇಳಿಕೆ ಸತ್ಯವೆಂದೇ ಕಾಣುತ್ತದೆ. ಆದರೂ ಭರತೋತ್ತರ ಕಾಲದಲ್ಲಿ ಪ್ರವರ್ಧಮಾನಕ್ಕೆ ಬಂದ ಅನೇಕ ಉಪರೂಪಕಗಳ ಸಾಧ್ಯತೆಗಳನ್ನು ಹೊಂದಿದ ಭರತಾರ್ಣವ- ಒಂದು ಶೋಧಕ್ಕೆ ಆಕರವಾಗುವಷ್ಟರ ಮಟ್ಟಿಗೆ ವಿಚಾರಬಾಹುಳ್ಯವನ್ನು ಹೊಂದಿದೆ.
Summary:
Please note that all contributions to enIKSwiki are considered to be released under the Creative Commons Attribution-ShareAlike (see
Enwiki:Copyrights
for details). If you do not want your writing to be edited mercilessly and redistributed at will, then do not submit it here.
You are also promising us that you wrote this yourself, or copied it from a public domain or similar free resource.
Do not submit copyrighted work without permission!
Cancel
Editing help
(opens in new window)
Navigation menu
Personal tools
Not logged in
Talk
Contributions
Log in
Namespaces
Page
Discussion
English
Views
Read
View history
More
Navigation
Main page
Help about MediaWiki
Tools
What links here
Related changes
Special pages
Page information