Editing
ನಿಃಶಂಕ ಶಾರ್ಙ್ಗದೇವನ ಸಂಗೀತರತ್ನಾಕರ
(section)
Jump to navigation
Jump to search
Warning:
You are not logged in. Your IP address will be publicly visible if you make any edits. If you
log in
or
create an account
, your edits will be attributed to your username, along with other benefits.
Anti-spam check. Do
not
fill this in!
== ಶಾರ್ಙ್ಗದೇವ- ವೈಯಕ್ತಿಕ ವಿವರಗಳು == ಭರತಮುನಿಯ ನಾಟ್ಯಶಾಸ್ತ್ರದ ವ್ಯಾಖ್ಯಾನಕಾರರಲ್ಲಿ ಪ್ರಸಿದ್ಧನಾದವ ಹತ್ತನೇ ಶತಮಾನದ ಆಸುಪಾಸಿಗೆ ಸಲ್ಲುವ ಕಾಶ್ಮೀರದ ಪ್ರತ್ಯಭಿಜ್ಞಾಶೈವ ಸಿದ್ಧಾಂತ ದರ್ಶನದ ಆಚಾರ್ಯ ಅಭಿನವಗುಪ್ತ. ಆತನ ಅನೇಕ ಲಕ್ಷಣ ವ್ಯಾಖ್ಯೆಗಳನ್ನು ಶಾರ್ಙ್ಗದೇವನ ಶಾಸ್ತ್ರಲಕ್ಷಣಭೇದಗಳು ಅನುಕರಿಸಿದಂತಿವೆ. ಹಾಗೆ ನೋಡಿದರೆ ಶಾರ್ಙ್ಗದೇವನ ಪೂರ್ವಿಕರು ಕೂಡಾ ಕಾಶ್ಮೀರದವರು. ವೃಷಗಣವೆಂಬ ಗೋತ್ರದ ಬ್ರಾಹ್ಮಣ ಕುಟುಂಬ. ಶಾರ್ಙ್ಗದೇವನ ತಾತ ಭಾಸ್ಕರದೇವ, ಆಯುರ್ವೇದ ವೈದ್ಯರು. ಭಾರತೀಯ ಉಪಖಂಡದ ವಾಯವ್ಯ ಪ್ರದೇಶಗಳಲ್ಲಿ ಇಸ್ಲಾಮಿಕ್ ಆಕ್ರಮಣ ಮತ್ತು ದೆಹಲಿ ಸುಲ್ತಾನರ ಪ್ರಾರಂಭದ ಯುಗದಲ್ಲಿ, ಅವರ ಕುಟುಂಬವು ದಕ್ಷಿಣಕ್ಕೆ ವಲಸೆ ಬಂದು ೧೧೭೩ರಿಂದ ೧೧೯೨ರಲ್ಲಿ ಆಳಿದ ಸೇವುಣ ಯಾದವ ರಾಜ ಭಿಲ್ಲಮನ ಆಶ್ರಯ ಪಡೆದರು. ಅನಂತರ ೧೨೦೦ಸಾಮಾನ್ಯ ಶಕದಲ್ಲಿ ಎರಡನೇ ಸಿಂಹನ/ಸಿಂಗನ ಪೋಷಣೆಗೆ ಬಂದರು. ಉತ್ತರಕರ್ನಾಟಕ, ಮಹಾರಾಷ್ಟ್ರ ಪ್ರಾಂತ್ಯವನ್ನು ಆಳುತ್ತಿದ್ದ ದೇವಗಿರಿಯ ಈ ಯಾದವ ಸೇವುಣ ದೊರೆಗಳು ಮೂಲತಃ ಕಲ್ಯಾಣದ ಚಾಲುಕ್ಯ ಅರಸರಿಗೆ ಸಾಮಂತ ಸಂಸ್ಥಾನವಾಗಿದ್ದವರು. ಅಚ್ಚ ಕನ್ನಡಿಗರು. ಕ್ರಮೇಣ ಸ್ವತಂತ್ರ ರಾಜ್ಯಭಾರ ಘೋಷಿಸಿಕೊಂಡಿದ್ದರೂ ಕನ್ನಡವನ್ನೇ ರಾಜ್ಯಾಡಳಿತ ಭಾಷೆಯಲ್ಲೊಂದಾಗಿ ಬಳಸುತ್ತಿದ್ದವರು. ಶಾರ್ಙ್ಗದೇವನ ತಂದೆ ಸೋಡಲದೇವನು ಕರಣಿಕ ಮುಖ್ಯಸ್ಥನಾಗಿ ಅಂದರೆ ಲೆಕ್ಕಪತ್ರ ವ್ಯವಹಾರದ ಸುಪರ್ದಿಯನ್ನು ನೋಡಿಕೊಳ್ಳುತ್ತಿದ್ದ ಕಂದಾಯಾಧಿಕಾರಿ. ಜೊತೆಗೆ ಯುದ್ಧಯಾತ್ರೆಯಲ್ಲಿ ಪಾಲ್ಗೊಂಡ ಸೇನಾನಿಯೂ ಆಗಿದ್ದನು. ತಂದೆಯ ಬಳಿಕ ಶಾರ್ಙ್ಗದೇವನು ತಂದೆಯ ಕರಣಿಕ ಸ್ಥಾನಕ್ಕೆ ನೇಮಿಸಲ್ಪಡ್ತಾನೆ.ದೊರೆ ಮತ್ತು ತನ್ನ ತಂದೆಯ ಬಗ್ಗೆ, ತನ್ನ ಮತ್ತು ತನ್ನ ವಂಶದ ಬಗ್ಗೆ ಶಾರ್ಙ್ಗದೇವ ಬಹುವಾಗಿ ಕೊಂಡಾಡಿ ಬರೆದಿದ್ದಾನೆ. ಅನವದ್ಯವಿದ್ಯಾವಿನೋದ, ಶ್ರೀಕರಣೇಶ್ವರ ಎಂಬುದು ಈತನ ಬಿರುದುಗಳಾಗಿದ್ದವು ಎನ್ನುವುದೂ ತಿಳಿದುಬರುತ್ತದೆ. ಹಾಗೆಂದೇ ‘ಶ್ರೀಮತ್ ಅನವದ್ಯವಿದ್ಯಾವಿನೋದಶ್ರೀಕರಣಾಧಿಪತಿಶ್ರೀಸೋಡಲದೇವನಂದನನಿಃಶಂಕಶ್ರೀಶಾರ್ಙ್ಗದೇವ ’ನೆಂದೇ ಕೀರ್ತಿಸಿಕೊಂಡು ಸಂಗೀತರತ್ನಾಕರಗ್ರಂಥ ಸಮಾಪ್ತಿಗೊಳಿಸಿದ್ದಾನೆ. ತನ್ನ ಉದ್ಯೋಗದ ಜೊತೆಗೆ, ಶಾರ್ಙ್ಗದೇವನು ಕುಟುಂಬ ವೃತ್ತಿಯಾದ ಆಯುರ್ವೇದವನ್ನು, ಸಂಗೀತಶಾಸ್ತ್ರವನ್ನು ಅಭ್ಯಾಸ ಮಾಡಿದ್ದ. ಕಾವ್ಯಮೀಮಾಂಸೆ, ವ್ಯಾಕರಣ, ಛಂದಸ್ಸು, ತಂತ್ರಗಳಲ್ಲೂ ಸಾಕಷ್ಟು ಪರಿಶ್ರಮವಿತ್ತು. ತನ್ನ ಬಿಡುವಿನ ವೇಳೆಯಲ್ಲಿ, ಭಾರತೀಯ ಸಂಗೀತದ ಲಕ್ಷಣರಚನೆಯನ್ನು ಮಾಡುತ್ತಿದ್ದ. ಅದರ ಫಲವೇ ಸಂಗೀತರತ್ನಾಕರ.
Summary:
Please note that all contributions to enIKSwiki are considered to be released under the Creative Commons Attribution-ShareAlike (see
Enwiki:Copyrights
for details). If you do not want your writing to be edited mercilessly and redistributed at will, then do not submit it here.
You are also promising us that you wrote this yourself, or copied it from a public domain or similar free resource.
Do not submit copyrighted work without permission!
Cancel
Editing help
(opens in new window)
Navigation menu
Personal tools
Not logged in
Talk
Contributions
Log in
Namespaces
Page
Discussion
English
Views
Read
View history
More
Navigation
Main page
Help about MediaWiki
Tools
What links here
Related changes
Special pages
Page information