Editing
ನಂದಿಕೇಶ್ವರನ ಭರತಾರ್ಣವ
(section)
Jump to navigation
Jump to search
Warning:
You are not logged in. Your IP address will be publicly visible if you make any edits. If you
log in
or
create an account
, your edits will be attributed to your username, along with other benefits.
Anti-spam check. Do
not
fill this in!
== ಭರತಾರ್ಣವ- ಗ್ರಂಥಕ್ರಮ, ಸಂಪಾದನೆ ಮತ್ತು ಬೆರಕೆಗಳು == ಭರತ ಎಂಬ ವ್ಯಕ್ತಿ ಅಥವಾ ತತ್ತ್ವಕ್ಕೆ ಹೊಂದಿಕೊಂಡ ಆರ್ಣವ ಅಂದರೆ ಸಾಗರಪ್ರಾಯಿಯಾದ ಗ್ರಂಥ ಎಂಬ ಅರ್ಥವುಳ್ಳದ್ದು ಭರತಾರ್ಣವ. ಇದು ಸುಮತಿಬೋಧಕ, ಪಾರ್ವತೀಪ್ರಯುಕ್ತ ಭರತಚಂದ್ರಿಕಾ, ಗುಹೇಶಭರತ ಲಕ್ಷಣ ಮತ್ತು ಕರಣಭೂಷಣ ಮೊದಲಾಗಿ ಇಂದಿಗೆ ಸಂಪೂರ್ಣವಾಗಿ ಕಳೆದುಹೋಗಿರುವ ಗ್ರಂಥಗಳಲ್ಲಿದ್ದ ವಿಚಾರಗಳನ್ನೊಳಗೊಂಡ ಒಂದು ಸಂಕಲನ ಕೃತಿ. ಈ ವಿಚಾರವೂ ಅದೇ ಗ್ರಂಥದಲ್ಲಿ ದೊರಕುವ ಲಕ್ಷಣಶ್ಲೋಕಗಳಿಂದ ದೃಢಪಡುತ್ತದೆ. ವಿದ್ವಾಂಸರಾದ ಮಾನವಲ್ಲಿ ರಾಮಕೃಷ್ಣಕವಿಗಳೂ ಕೂಡಾ ಕರಣಭೂಷಣವೆಂಬ ತಾಂಡವನೃತ್ತವಿಷಯಕವಾದ ಒಂದು ಗ್ರಂಥವಿದೆಯೆಂದು ಹೇಳಿ ಭರತಾರ್ಣವವು ಕ್ರಿ.ಶ ೧೧ನೇ ಶತಮಾನದ ನಂತರದಲ್ಲಿ ಬಂದುದೆಂದೂ ಊಹಿಸುತ್ತಾರೆ. ಭರತಾರ್ಣವದ ೪೦೦೦ ಶ್ಲೋಕಗಳ ಪೈಕಿ ಕೇವಲ ೧೨೦೦ರಷ್ಟು ಶ್ಲೋಕಗಳು ಮಾತ್ರ ಇಂದಿಗೆ ದೊರಕಿದ್ದು ಬೃಹತ್ ಪ್ರಮಾಣದ ಭಾಗವೊಂದು ಲುಪ್ತವಾಗಿದೆ ಎನ್ನುವುದು ಅದನ್ನು ಸಂಪಾದಿಸಿದ ವಾಸುದೇವಶಾಸ್ತ್ರಿಗಳು ಎಂಬ ವಿದ್ವಾಂಸರಿಂದ ತಿಳಿದುಬರುತ್ತದೆ. ಮೈಸೂರು ಮತ್ತು ಮದ್ರಾಸಿನ ಓರಿಯಂಟಲ್ ರೀಸರ್ಚ್ ಲೈಬ್ರೆರಿ, ಪೂನಾದ ಬರೋಡಾ ಓರಿಯಂಟಲ್ ರೀಸರ್ಚ್ ಲೈಬ್ರೆರಿ ಮತ್ತು ತಂಜಾವೂರು ಸರಸ್ವತಿ ಮಹಲ್ ಲೈಬ್ರೆರಿಯಲ್ಲಿ ಇರುವ ಬೇರೆ ಬೇರೆ ಭರತಾರ್ಣವದ ಹಸ್ತಪ್ರತಿಯಿಂದ ಆಯ್ದು ಒಂದು ಪುಸ್ತಕವಾಗಿಸಿ ಪ್ರಕಟಿಸಲಾಗಿದೆ. ಇನ್ನೊಂದು ತಾಳೆಗರಿ ದೊರೆತದ್ದು ೧೫೦-೨೦೦ ವರುಷಗಳಷ್ಟೇ ಹಿಂದಿನದ್ದೆಂದೂ, ಅದು ಸಂಸ್ಕೃತ ಭಾಷೆಯಲ್ಲಿದ್ದು ತೆಲುಗು ಲಿಪಿ ಹಾಗೂ ವ್ಯಾಖ್ಯಾನವನ್ನು ಹೊಂದಿದೆಯೆಂದು ಕೂಡಾ ತಿಳಿದುಬರುತ್ತದೆ. ಆದ್ದರಿಂದಲೇ ಈ ಗ್ರಂಥದ ರಚನಾಕ್ರಮದಲ್ಲಿ ಒಂದು ನಿಶ್ಚಿತ ಮಾದರಿ ಇಲ್ಲ. ಮತ್ತು ಪರಸ್ಪರ ವಿಷಯಸಂಬಂಧಗಳನ್ನು ಖಚಿತವಾಗಿ ಕಾಣಲಾಗದು; ಬಿಡಿಬಿಡಿಯಾಗಿವೆ. ಪ್ರಾಚೀನ ಸಂಸ್ಕೃತ ಗ್ರಂದ್ಥಗಳ ಆಂಭದಲ್ಲಿ ಕಾಣಸಿಗುವ ನಾಂದೀಶ್ಲೋಕ, ಕಥೆಯ ಎಳೆ, ಸಂವಾದಗಳು ಇಲ್ಲಿಲ್ಲ. ಜೊತೆಗೆ ಹರಿಪಾಲನ ಸಂಗೀತಸುಧಾಕರ ಎಂಬ ಗ್ರಂಥದ ಶ್ಲೋಕಗಳಿಗೂ ಭರತಾರ್ಣವಕ್ಕೂ ಹೋಲಿಕೆಗಳಿದ್ದು; ಹರಿಪಾಲೀಯ ಸಂಗೀತಸುಧಾಕರ ಗ್ರಂಥವು ಸರಸ್ವತೀಮಹಲ್ ಲೈಬ್ರೆರಿಯ ಭರತಾರ್ಣವದ ಹಸ್ತಪ್ರತಿಯಲ್ಲಿ ಬೆರಕೆಯಾಗಿರುವುದನ್ನು ಗಮನಿಸಬಹುದು. ಭರತಾರ್ಣವದ ಸಂಪಾದಕರಾದ ವಾಸುದೇವಶಾಸ್ತ್ರಿಗಳು ನೀಡಿರುವ ಟಿಪ್ಪಣಿಯಲ್ಲಿ - ಮೂಲ ಭರತಾರ್ಣವವು ಕಳೆದುಹೋಗಿದೆಯೆಂದೂ, ಕೆಲವೊಂದು ಪಾದಭೇದಗಳನ್ನು ಭರತಾರ್ಣವ ಸಂಗ್ರಹ ಹಾಗೂ ಹರಿಪಾಲದೇವನ ಸಂಗೀತ ಸುಧಾಕರದ ನೆರವಿನಿಂದ ಪುನರ್ ಸಂಯೋಜಿಸಲಾಗಿದೆಯೆಂದೂ ತಿಳಿಸಿದ್ದಾರೆ. ಹಾಗೆಯೇ ಈ ಲೇಖನದ ರಚನಾಕಾರರ ಅಧ್ಯಯನದ ವೇಳೆಯೂ ಕೆಲವೊಂದು ಕರಣವಿಚಾರದಲ್ಲಿ ಹರಿಪಾಲೀಯ ಸಂಗೀತ ಸುಧಾಕರದ ವಿಷಯಗಳು ಭರತಾರ್ಣವದ ಶ್ಲೋಕಗಳೊಂದಿಗೆ ಬೆರಕೆಯಾಗಿರುವನ್ನು ಪತ್ತೆ ಹಚ್ಚಲಾಗಿದೆ.<ref>ಓದಿ. ಯಕ್ಷಮಾರ್ಗಮುಕುರ.</ref>. ಒಟ್ಟಿನಲ್ಲಿ ಹಸ್ತಪ್ರತಿಗಳಲ್ಲಿ ಬೇರೆ ಬೇರೆ ಗ್ರಂಥಾಂತರ ಮತ್ತು ಆಧಾರಗಳಿಂದ ಸಂಗ್ರಹಿತ ಗ್ರಂಥ ಭರತಾರ್ಣವ ಎನ್ನುವುದು ಸ್ಪಷ್ಟಪಡುತ್ತದೆ. ಹಾಗೆಯೇ ಭರತಾರ್ಣವವು ನಂದಿಕೇಶ್ವರನ ಹೆಸರಿನಲ್ಲಿರುವ ಅಭಿನಯದರ್ಪಣವೆಂಬ ಮತ್ತೊಂದು ಪ್ರಸಿದ್ಧ ಗ್ರಂಥಕ್ಕೆ ಮೂಲಕೃತಿ ಎಂಬ ಅಭಿಪ್ರಾಯವಿದೆ. ಆದರೆ ಅದನ್ನು ಪುಷ್ಟೀಕರಿಸುವ ಅಂಶಗಳು ಕಾಣಸಿಗುವುದು ಬಹಳ ಕಡಿಮೆ. ಏಕೆಂದರೆ ರಚನೆಯ ಕ್ರಮಗಳೂ ಭಿನ್ನವಾಗಿವೆ. ಲಕ್ಷಣಗಳಲ್ಲಿ ವ್ಯತ್ಯಾಸ ಬಹಳವಿದೆ. ಹಾಗಾಗಿಯೇ ಇರುವವ ಓರ್ವ ನಂದಿಕೇಶ್ವರನಲ್ಲ; ಬದಲಾಗಿ ನಂದಿಕೇಶ್ವರನೆಂಬ ಬೇರೆ ಬೇರೆ ರಚನಾಕಾರರು ಬೇರೆ ಬೇರೆ ಕಾಲಗಳಲ್ಲಿ ಇದ್ದಿರಬಹುದೆನ್ನುವುದು ಅಧ್ಯಯನದಿಂದ ಮನವರಿಕೆಯಾಗುತ್ತದೆ.<ref>ನಂದಿಕೇಶ್ವರ ಅಧ್ಯಯನ ಕೃತಿ. https://www.noopurabhramari.com/want-to-subscribe-noopura-bhramari-and-purchase-the-dance-books/</ref>
Summary:
Please note that all contributions to enIKSwiki are considered to be released under the Creative Commons Attribution-ShareAlike (see
Enwiki:Copyrights
for details). If you do not want your writing to be edited mercilessly and redistributed at will, then do not submit it here.
You are also promising us that you wrote this yourself, or copied it from a public domain or similar free resource.
Do not submit copyrighted work without permission!
Cancel
Editing help
(opens in new window)
Navigation menu
Personal tools
Not logged in
Talk
Contributions
Log in
Namespaces
Page
Discussion
English
Views
Read
View history
More
Navigation
Main page
Help about MediaWiki
Tools
What links here
Related changes
Special pages
Page information